May 23, 2026
Saturday, May 23, 2026
spot_img

ಮೋದಿ ಜೊತೆ ಚರ್ಚೆ: ಭಾರತಕ್ಕೆ ಅಗತ್ಯವಿರುವಷ್ಟು ಇಂಧನ ಪೂರೈಕೆ ಮಾಡಲು ಅಮೆರಿಕ ಸಿದ್ಧ ಎಂದ ರೂಬಿಯೊ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಮಹತ್ವದ ಮಾತುಕತೆಯಲ್ಲಿ ಭಾರತಕ್ಕೆ ಅಮೆರಿಕದ ಇಂಧನ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಒತ್ತಾಯಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ತೈಲ ಸರಬರಾಜು ಅಸ್ಥಿರತೆ ಮತ್ತು ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆ ಭಾರತ ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸುವ ಅಗತ್ಯವಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

ಭಾರತಕ್ಕೆ ಅಗತ್ಯವಿರುವಷ್ಟು ಇಂಧನ ಪೂರೈಕೆ ಮಾಡಲು ಅಮೆರಿಕ ಸಿದ್ಧವಾಗಿದೆ ಎಂದು ರೂಬಿಯೊ ಹೇಳಿರುವುದು ಗಮನ ಸೆಳೆದಿದೆ. ಅಮೆರಿಕದ ತೈಲ ಮತ್ತು ಅನಿಲ ಉತ್ಪಾದನೆ ಐತಿಹಾಸಿಕ ಮಟ್ಟದಲ್ಲಿದ್ದು, ಭಾರತವನ್ನು ಪ್ರಮುಖ ಇಂಧನ ಪಾಲುದಾರ ರಾಷ್ಟ್ರವನ್ನಾಗಿ ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:

ಇಂಧನ ಭದ್ರತೆ-ವ್ಯಾಪಾರ ಸಹಕಾರದತ್ತ ಗಮನ

ಪ್ರಧಾನಿ ಮೋದಿ ಮತ್ತು ರೂಬಿಯೊ ನಡುವಿನ ಮಾತುಕತೆಯಲ್ಲಿ ಇಂಧನ ಭದ್ರತೆ, ವ್ಯಾಪಾರ, ರಕ್ಷಣಾ ಸಹಕಾರ, ತಂತ್ರಜ್ಞಾನ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಕಾರ್ಯತಂತ್ರ ಪ್ರಮುಖ ವಿಷಯಗಳಾಗಿದ್ದವು. ಹೋರ್ಮುಜ್ ಜಲಸಂಧಿಯ ಸುತ್ತ ಉದ್ಭವಿಸಿರುವ ಅನಿಶ್ಚಿತತೆಯಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಪರ್ಯಾಯ ಸರಬರಾಜು ಮೂಲಗಳತ್ತ ಗಮನ ಹರಿಸುತ್ತಿದೆ.

ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ಬಲಗೊಂಡಿದ್ದು, QUAD ಸಹಕಾರ, ರಕ್ಷಣಾ ಒಪ್ಪಂದಗಳು ಹಾಗೂ ತಂತ್ರಜ್ಞಾನ ಕ್ಷೇತ್ರದ ಸಹಭಾಗಿತ್ವವೂ ವೇಗ ಪಡೆದಿದೆ. ಈ ಭೇಟಿಯು ಉಭಯ ರಾಷ್ಟ್ರಗಳ ಕಾರ್ಯತಂತ್ರದ ಸಂಬಂಧಗಳಿಗೆ ಹೊಸ ಉತ್ತೇಜನ ನೀಡಲಿದೆ ಎಂದು ರಾಜತಾಂತ್ರಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !