ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ನಲ್ಲಿ ಇಂದು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಗುಜರಾತ್ ಹಾಗೂ ರಾಜಸ್ತಾನ ತಂಡಗಳು ಸಜ್ಜಾಗುತ್ತಿದ್ದರೆ, ಇತ್ತ ಲಕ್ನೋ ಸೂಪರ್ಜೈಂಟ್ಸ್ ತಂಡದಿಂದ ಶಾಕಿಂಗ್ ವಿಚಾರ ಹೊರಬಿದ್ದಿದೆ.
ಐಪಿಎಲ್ ನ ಕಳೆದ ಎರಡು ಆವೃತ್ತಿಗಳಿಂದ ಲಕ್ನೋ ತಂಡದ ನಾಯಕತ್ವ ವಹಿಸಿದ್ದ ರಿಷಭ್ ಪಂತ್ ಇದೀಗ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಬಾರಿ ಆವೃತ್ತಿಯಲ್ಲಿ ಲಕ್ನೋ ಪ್ರದರ್ಶನ ತೀರ ಕಳಪೆಯಾಗಿತ್ತು. 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು.
ಮುಂದಿನ ಸೀಸನ್ ಗೆ ಬಲಿಷ್ಠ ತಂಡ
ಇದೀಗ ಲಕ್ನೋ ಫ್ರಾಂಚೈಸಿ ಮಾಹಿತಿ ಹಂಚಿಕೊಂಡಿದ್ದು, ರಿಷಭ್ ಪಂತ್ ನಾಯಕತ್ವವನ್ನು ತ್ಯಜಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದು, ಹೀಗಾಗಿ ಔಪಚಾರಿಕವಾಗಿ ಘೋಷಿಸುತ್ತಿದ್ದೇವೆ. ಪಂತ್ ಅವರ ನಿರ್ಧಾರವನ್ನು ನಾವು ಸ್ವಾಗತಿಸಿವೆ. ಮುಂದಿನ ಸೀಸನ್ ಆರಂಭಕ್ಕೂ ಮೊದಲು ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಗುರಿ ಹೊಂದಿರುವುದಾಗಿ ತಿಳಿಸಿದೆ.
ದುಬಾರಿ ಆಟಗಾರನಿಂದ ಹೀನಾಯ ಪ್ರದರ್ಶನ
ಲಕ್ನೋ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಖರೀದಿಸಿತು. ಬಳಿಕ ತಂಡದ ನಾಯಕರನ್ನಾಗಿಯೂ ನೇಮಿಸಲಾಯಿತು. ಆದಾಗ್ಯೂ, ಅವರ ನಾಯಕತ್ವದಲ್ಲಿ, ಲಕ್ನೋ ಎರಡೂ ಆವೃತ್ತಿಗಳಲ್ಲಿ ಪ್ಲೇಆಫ್ ತಲುಪಲು ವಿಫಲವಾಯಿತು. ಐಪಿಎಲ್ 2025 ರಲ್ಲಿ, ಲಕ್ನೋ 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳನ್ನು ಗೆದ್ದು ಏಳನೇ ಸ್ಥಾನ ಪಡೆದುಕೊಂಡರೆ, 2026 ರಲ್ಲಿ, ತಂಡವು 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು 10 ನೇ ಸ್ಥಾನದಲ್ಲಿ ಮುಗಿಸಿತು.



