July 13, 2026
Monday, July 13, 2026
spot_img

ಡಿಕೆಶಿ ಮೆಗಾ ಪ್ಲಾನ್ ಜಾರಿ: ಕರ್ನಾಟಕದಲ್ಲಿ 10,000 ಯುವ ಸಂಘಗಳ ಸ್ಥಾಪನೆಗೆ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಯುವಕರನ್ನು ಕ್ರೀಡೆ, ಸಂಸ್ಕೃತಿ, ನಾಯಕತ್ವ ಮತ್ತು ಸಾಮಾಜಿಕ ಚಟುವಟಿಕೆಗಳತ್ತ ಸೆಳೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯಾದ್ಯಂತ 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ಗಳ ಸ್ಥಾಪನೆಗೆ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಯೋಜನೆಗೆ ವಾರ್ಷಿಕ ₹1,000 ಕೋಟಿ ಅನುದಾನ ಮೀಸಲಿಡಲಾಗಿದೆ.

ಗ್ರಾಮ-ನಗರ ಸೇರಿ 10 ಸಾವಿರ ಸಂಘಗಳು

ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6,000 ಹಾಗೂ ನಗರ ಪ್ರದೇಶಗಳಲ್ಲಿ 4,000 ಯುವ ಸಂಘಗಳನ್ನು ರಚಿಸಲಾಗುತ್ತದೆ. ಪ್ರತಿ ಸಂಘಕ್ಕೆ ವಾರ್ಷಿಕ ₹10 ಲಕ್ಷ ಅನುದಾನ ನೀಡಲಾಗುತ್ತದೆ.

ಇದನ್ನೂ ಓದಿ:

ಯೋಜನೆಯ ಉದ್ದೇಶವೇನು?

ಯುವಜನರಲ್ಲಿ ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ವೈಜ್ಞಾನಿಕ ಮನೋಭಾವ, ನಾಯಕತ್ವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಉದ್ದೇಶದಿಂದ ಈ ಸಂಘಗಳನ್ನು ಆರಂಭಿಸಲಾಗುತ್ತಿದೆ. ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇತರ ಇಲಾಖೆಗಳ ಸಹಯೋಗದಲ್ಲಿ ಜಾರಿಗೊಳಿಸಲಿದೆ.

ಯೋಜನೆಯ ಪ್ರಮುಖ ಅಂಶಗಳು

ರಾಜ್ಯಾದ್ಯಂತ 10,000 ಯುವ ಸಂಘಗಳ ಸ್ಥಾಪನೆ.
ಪ್ರತಿ ಸಂಘಕ್ಕೆ ವಾರ್ಷಿಕ ₹10 ಲಕ್ಷ ಅನುದಾನ.
ಯೋಜನೆಗೆ ಒಟ್ಟು ₹1,000 ಕೋಟಿ, ಆಡಳಿತ ವೆಚ್ಚ ಸೇರಿ ಸುಮಾರು ₹1,010 ಕೋಟಿ ಮೀಸಲು.
ಪ್ರತಿ ಸಂಘಕ್ಕೆ ತರಬೇತುದಾರರ ನೇಮಕ ಹಾಗೂ ಗೌರವಧನ ವ್ಯವಸ್ಥೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನಸಂಖ್ಯೆ ಆಧರಿಸಿ ಸಂಘಗಳ ರಚನೆ.

ಸರ್ಕಾರದ ಈ ಯೋಜನೆಯು ಯುವಕರನ್ನು ಸಾಮಾಜಿಕ, ಕ್ರೀಡಾ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದ್ದು, ರಾಜ್ಯದಾದ್ಯಂತ ಹಂತ ಹಂತವಾಗಿ ಜಾರಿಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !