April 18, 2026
Saturday, April 18, 2026
spot_img

Pros and Cons | ಸಮ್ಮರ್‌ನಲ್ಲಿ ತೂಕ ಇಳಿಸೋ ಗೋಲ್‌ ಇಟ್ಕೊಂಡಿದ್ದೀರಾ? ಇದನ್ನು ಮಿಸ್‌ ಮಾಡದೇ ಓದಿ

ಬೇಸಿಗೆಯಲ್ಲಿ ತೂಕ ಇಳಿಸೋದು ಸ್ವಲ್ಪ ಸುಲಭ. ಯಾಕಂದ್ರೆ ಬೇಸಿಗೆ ಊಟ ತಿಂಡಿ ಬಗ್ಗೆ ಜಾಸ್ತಿ ಇಂಟ್ರೆಸ್ಟ್‌ ಇರೋದಿಲ್ಲ. ಹಾಗೆ ವರ್ಕೌಟ್‌ ಮಾಡಿದ್ರೆ ಹೆಚ್ಚು ಕ್ಯಾಲೋರಿ ಕರಗಿ ಹೋಗುತ್ತದೆ. ಆದರೆ ವರ್ಕೌಟ್‌ ಮಾಡಲು ಮುನ್ನ ಬೇಸಿಗೆಯಲ್ಲಿ ತೂಕ ಇಳಿಸೋಕೆ ಯಾವುದು ಪಾಸಿಟಿವ್‌ ಯಾವುದು ನೆಗೆಟಿವ್‌ ಆಗಬಹುದು ನೋಡಿ..

ಪಾಸಿಟಿವ್‌
ಚಳಿ ಇಲ್ಲ ಮಳೆ ಇಲ್ಲ ಬೆಳ್ಳಂಬೆಳಗ್ಗೆ ಎದ್ದು ವರ್ಕೌಟ್‌ಗೆ ಹೋಗಬಹುದು. ಮನೆಯಲ್ಲಿ ಹೊದ್ದು ಮಲಗೋದು ನಿಲ್ಲುತ್ತದೆ.

ಸದಾ ನೀರು ಕುಡಿಯಬೇಕು ಅನ್ನಿಸೋದ್ರಿಂದ ಗೊತ್ತೋ ಗೊತ್ತಿಲ್ಲದೆಯೋ ಜಾಸ್ತಿ ನೀರನ್ನು ಕುಡಿಯುತ್ತೀರಿ.

ಮನೆಯಲ್ಲಿಯೇ ವರ್ಕೌಟ್‌ ಮಾಡೋಕೆ ಇಂಟ್ರೆಸ್ಟ್‌ ಇಲ್ಲ ಅನ್ನೋ ಹಾಗಿಲ್ಲ. ಹಾಯಾಗಿ ಯಾವ ಸಮಯಕ್ಕಾದ್ರೂ ವರ್ಕೌಟ್‌ ಮಾಡಿ ಮುಗಿಸಬಹುದು.

ಈ ಸಮಯದಲ್ಲಿ ನೀವು ಬ್ಯಾಲೆನ್ಸ್‌ ಆದ ಡಯಟ್‌ ಮಾಡಬಹುದು. ಸೊಪ್ಪು, ತರಕಾರಿ, ಪಲ್ಯಕ್ಕೆ ಮಣೆ ಹಾಕಬಹುದು.

ನೆಗೆಟಿವ್‌
ಅತಿಯಾದ ಬಿಸಿಲಿನಿಂದ ಜಿಮ್‌ಗೆ ಹೋಗಬೇಕು ಅನ್ನೋ ಮನಸೇ ಆಗೋದಿಲ್ಲ. ಅದರಲ್ಲೂ ಮನೆಯಿಂದ ಜಿಮ್‌ ದೂರವಿದ್ರೆ ಕಷ್ಟ.

ಹೊರಗಡೆ ಹೋಗಿ ವರ್ಕೌಟ್‌ ಮಾಡೋಕೆ ಆಗಲ್ಲ. ಮನೆಯಲ್ಲೇ ಮಾಡೋದಕ್ಕೆ ಮೋಟಿವೇಷನ್‌ ಸಿಗೋದಿಲ್ಲ. ಒಣ ಒಣ ವಾತಾವರಣ ನಿದ್ದೆ ತರಿಸುತ್ತದೆ.

ಕೆಲವಮೊಮ್ಮೆ ಆ ಕೆಲಸ ಈ ಕೆಲಸದಲ್ಲಿ ಮುಳುಗುವ ಜನಕ್ಕೆ ನೀರು ಕುಡಿಯೋದು ಮರೆತು ಹೋಗುತ್ತದೆ.

ಸಮ್ಮರ್‌ನಲ್ಲಿ ಪ್ರೋಟೀನ್‌ ಸೋರ್ಸ್‌ಗಳಾದ ಚಿಕನ್‌, ಫಿಶ್‌, ಮೊಟ್ಟೆ ತಿನ್ನೋಕೆ ಮನಸಾಗೋದಿಲ್ಲ.

ಮನೆಯಲ್ಲಿ ಇದ್ದರೆ ನಿದ್ದೆಗೆ ಶರಣಾಗೋದು ನೂರಕ್ಕೆ ನೂರರಷ್ಟು ಸತ್ಯ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !