April 15, 2026
Wednesday, April 15, 2026
spot_img

ಹೋಳಿ ಆಡೋ ಭರದಲ್ಲಿ ನಿಮ್ಮ ಸ್ಕಿನ್ ಬಗ್ಗೆ ಮರೆತು ಬಿಡ್ಬೇಡಿ: ಬಣ್ಣದಾಟದಲ್ಲಿ ಚರ್ಮದ ರಕ್ಷಣೆ ಹೇಗೆ?

ಹೋಳಿ ಹಬ್ಬ ಎಂದರೆ ಬಣ್ಣಗಳ ಸಂಭ್ರಮ. ಆದರೆ ರಂಗಿನಾಟದ ನಡುವೆ ಚರ್ಮದ ಆರೈಕೆ ಕಡೆಗಣಿಸಿದರೆ ಕಿರಿಕಿರಿ, ಚರ್ಮದ ಸಮಸ್ಯೆ ಮತ್ತು ಅಲರ್ಜಿಗಳು ಕಟ್ಟಿಟ್ಟ ಬುತ್ತಿ. ತಜ್ಞರ ಪ್ರಕಾರ, ಹಬ್ಬಕ್ಕೆ ಮುಂಚೆಯೇ ತ್ವಚೆಗೆ ಸಿದ್ಧತೆ ಅಗತ್ಯ.

ಹೋಳಿಗೆ ಕನಿಷ್ಠ ಐದು ದಿನಗಳ ಮೊದಲು ಚರ್ಮದ ನೈಸರ್ಗಿಕ ತಡೆಗೋಡೆಯನ್ನು ಕಾಪಾಡಬೇಕು. ಹೆಚ್ಚಾಗಿ ಸ್ಕ್ರಬ್ ಅಥವಾ ಎಕ್ಸ್‌ಫೋಲಿಯೇಷನ್ ಮಾಡುವುದು ತಪ್ಪಿಸಬೇಕು. ಸಾಕಷ್ಟು ನೀರು ಕುಡಿಯುವುದು, ಹಣ್ಣು ಸೇವನೆ ಮತ್ತು ಸಮರ್ಪಕ ನಿದ್ರೆ ಚರ್ಮವನ್ನು ಒಳಗಿನಿಂದ ಬಲಪಡಿಸುತ್ತದೆ.

ಇದನ್ನೂ ಓದಿ:

ಹಬ್ಬದ ಆಟಕ್ಕಿಂತ ಮೊದಲು ತೇವಾಂಶಯುಕ್ತ ಕ್ರೀಮ್ ಅಥವಾ ತೆಂಗಿನೆಣ್ಣೆ ಹಚ್ಚಿದರೆ ಬಣ್ಣಗಳು ಆಳಕ್ಕೆ ಹೀರಿಕೊಳ್ಳುವುದನ್ನು ಕಡಿಮೆ ಮಾಡಬಹುದು. ಹೊರಾಂಗಣ ಆಚರಣೆಗಳಿದ್ದರೆ ಹೆಚ್ಚಿನ ಎಸ್‌ಪಿಎಫ್ ಇರುವ ಸನ್‌ಸ್ಕ್ರೀನ್ ಬಳಕೆ ಉತ್ತಮ. ಸಾಧ್ಯವಾದಷ್ಟು ಸಾವಯವ ಹಾಗೂ ಒಣ ಬಣ್ಣಗಳನ್ನೇ ಆಯ್ಕೆ ಮಾಡುವುದು ಸುರಕ್ಷಿತ.

ಬಣ್ಣದಾಟದ ಬಳಿಕ ಗಟ್ಟಿಯಾಗಿ ಒರೆಸುವುದು ಬೇಡ. ಮೊದಲು ಎಣ್ಣೆ ಆಧಾರಿತ ಕ್ಲೆನ್ಸರ್ ಬಳಸಿ, ನಂತರ ಸೌಮ್ಯ ಫೇಸ್ ವಾಶ್ ಉಪಯೋಗಿಸಬೇಕು. ಕೆಲವು ದಿನಗಳು ಚರ್ಮದಲ್ಲಿ ಸಣ್ಣ ಕಿರಿಕಿರಿ ಕಂಡುಬಂದರೆ ಗಟ್ಟಿಯಾದ ಸ್ಕ್ರಬ್ ತಪ್ಪಿಸಿ ಸೌಮ್ಯ ಸೀರಮ್ ಬಳಸಿ ಆರೈಕೆ ಮುಂದುವರಿಸುವುದು ಒಳಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !