June 14, 2026
Sunday, June 14, 2026
spot_img

Home Remedies | ಗ್ಯಾಸ್ಟ್ರಿಕ್ ಬಂದಾಗ ಮಾತ್ರೆ ಹುಡುಕಬೇಡಿ, ಅಡುಗೆ ಮನೆಯಲ್ಲೇ ಇದೆ ಇದಕ್ಕೆ ತಕ್ಷಣದ ಪರಿಹಾರ!

ಹೊಟ್ಟೆ ಉಬ್ಬರ, ಎದೆಯುರಿ, ಹುಳಿ ತೇಗು, ಊಟ ಮಾಡಿದ ತಕ್ಷಣ ಹೊಟ್ಟೆ ಭಾರವಾದ ಅನುಭವ…
ಇವೆಲ್ಲವೂ ಗ್ಯಾಸ್ಟ್ರಿಕ್ ಸಮಸ್ಯೆಯ ಸಾಮಾನ್ಯ ಲಕ್ಷಣಗಳು. ಅನೇಕರು ಇಂತಹ ಸಂದರ್ಭದಲ್ಲಿ ತಕ್ಷಣ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ನಮ್ಮ ಅಡುಗೆ ಮನೆಯಲ್ಲೇ ಇರುವ ಕೆಲವು ನೈಸರ್ಗಿಕ ಪದಾರ್ಥಗಳು ಸಣ್ಣ ಪ್ರಮಾಣದ ಗ್ಯಾಸ್ಟ್ರಿಕ್ ಸಮಸ್ಯೆಗೆ ತಾತ್ಕಾಲಿಕ ನೆಮ್ಮದಿ ನೀಡಬಹುದು. ಇಲ್ಲೇ ಇದೆ ಮನೆಮದ್ದು

ತಂಪಾದ ಹಾಲು

ಎದೆಯುರಿ ಮತ್ತು ಅಸಿಡಿಟಿ ಹೆಚ್ಚಾದಾಗ ಒಂದು ಲೋಟ ತಂಪಾದ ಹಾಲು ಕುಡಿಯಿರಿ. ಇದು ಕೆಲವರಿಗೆ ಆರಾಮ ನೀಡಬಹುದು. ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಜೀರಿಗೆ ನೀರು

ಅಜೀರ್ಣ ಮತ್ತು ಹೊಟ್ಟೆ ಉಬ್ಬರಕ್ಕೆ ಜೀರಿಗೆ ಹಳೆಯ ಮನೆಮದ್ದು. ಒಂದು ಚಮಚ ಜೀರಿಗೆ ಕುದಿಸಿದ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ನೆರವಾಗಬಹುದು.

ಸೊಂಪಾಗಿ ಅಗಿಯಿರಿ ಸೋಂಪು

ಹೋಟೆಲ್‌ನಲ್ಲಿ ಊಟದ ಬಳಿಕ ಸೋಂಪು ಕೊಡುವುದಕ್ಕೂ ಕಾರಣವಿದೆ. ಇದು ಹೊಟ್ಟೆಯಲ್ಲಿನ ವಾಯು ಸಮಸ್ಯೆಯನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದನ್ನು ಕೂಡ ಟ್ರೈ ಮಾಡಬಹುದು.

ಓಮದ ನೀರು

ಓಮವನ್ನು ನೀರಿನಲ್ಲಿ ಕುದಿಸಿ ಕುಡಿಯುವುದು ಅಥವಾ ಸ್ವಲ್ಪ ಓಮವನ್ನು ಅಗಿಯುವುದು ಗ್ಯಾಸ್ ಮತ್ತು ಹೊಟ್ಟೆ ಸೆಳೆತವನ್ನು ಕಡಿಮೆ ಮಾಡಲು ನೆರವಾಗಬಹುದು.

ಇದನ್ನೂ ಓದಿ:

ಎಳನೀರು

ದೇಹವನ್ನು ತಂಪಾಗಿಡುವ ಎಳನೀರು, ಹೊಟ್ಟೆಯ ಉರಿ ಮತ್ತು ಅಸಿಡಿಟಿ ಸಮಸ್ಯೆಯನ್ನೂ ಕಡಿಮೆ ಮಾಡಲು ಸಹಕಾರಿಯಾಗಬಹುದು.

ಜೇನುತುಪ್ಪ

ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಜೀರ್ಣಾಂಗಕ್ಕೆ ಆರಾಮ ಸಿಗಬಹುದು.

ಗ್ಯಾಸ್ಟ್ರಿಕ್ ಆಗದಿರಲು ಇದನ್ನು ಗಮನದಲ್ಲಿಡಿ…

ಊಟದ ಸಮಯ ತಪ್ಪಿಸಬೇಡಿ, ಅತಿಯಾಗಿ ಖಾರ ಮತ್ತು ಎಣ್ಣೆಯುಕ್ತ ಆಹಾರ ಕಡಿಮೆ ಮಾಡಿ, ದಿನವಿಡೀ ಸಾಕಷ್ಟು ನೀರು ಕುಡಿಯಿರಿ, ಊಟ ಮಾಡಿದ ತಕ್ಷಣ ಮಲಗಬೇಡಿ, ಪ್ರತಿದಿನ ಕನಿಷ್ಠ 30 ನಿಮಿಷ ನಡೆಯಿರಿ.

ಗ್ಯಾಸ್ಟ್ರಿಕ್ ಸಮಸ್ಯೆ ಪದೇ ಪದೇ ಬರುತ್ತಿದ್ದರೆ ಅಥವಾ ತೀವ್ರ ಹೊಟ್ಟೆನೋವು, ವಾಂತಿ, ಮಲದಲ್ಲಿ ರಕ್ತ, ತೂಕ ಕಡಿಮೆಯಾಗುವುದು ಅಥವಾ ಎದೆನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಮನೆಯಲ್ಲಿರುವ ಈ ಸರಳ ವಿಧಾನಗಳು ಸಣ್ಣ ಪ್ರಮಾಣದ ಗ್ಯಾಸ್ಟ್ರಿಕ್ ಸಮಸ್ಯೆಗೆ ತಾತ್ಕಾಲಿಕ ನೆಮ್ಮದಿ ನೀಡಬಹುದು. ಆರೋಗ್ಯ ಸಮಸ್ಯೆ ಮುಂದುವರಿದರೆ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.ಸ್ಟ್ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !