October 10, 2026
Saturday, October 10, 2026
spot_img

CINE | ಮದುವೆಯ ಡೀಟೇಲ್ಸ್‌ ಶೇರ್‌ ಮಾಡ್ಬೇಡಿ, ನಮಗೆ ಸಮಸ್ಯೆ ಆಗತ್ತೆ! ರಶ್ಮಿಕಾ-ವಿಜಯ್‌ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ಇದೇ ತಿಂಗಳಲ್ಲಿ ನೆರವೇರಲಿದೆ. ನ್ಯಾಷನಲ್‌ ಕ್ರಶ್‌ ಮದುವೆ ಬಗ್ಗೆ ಸಿನಿ ಅಭಿಮಾನಿಗಳು ಫುಲ್‌ ಎಕ್ಸೈಟ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ವಿಜಯ್‌ ಮದುವೆಯ ಸ್ಥಳ. ಇನ್ವಿಟೇಷನ್‌ ಕಾರ್ಡ್‌ ಎಲ್ಲವೂ ವೈರಲ್‌ ಆಗಿದೆ.

ನಿನ್ನೆಯಷ್ಟೇ ಮದುವೆಯ ಕಾರ್ಡ್‌, ಕರೆಯೋಲೆಯಲ್ಲಿ ಏನೆಲ್ಲಾ ಐಟಮ್ಸ್‌ ಇಟ್ಟಿದ್ದಾರೆ ಎನ್ನುವ ಟ್ವೀಟ್‌ ಒಂದು ವೈರಲ್‌ ಆಗಿತ್ತು. ಕಾರ್ಡ್‌ನಲ್ಲಿ ಮದುವೆ ನಡೆಯುವ ಲೊಕೇಷನ್‌ ಕೂಡ ಇದೆ. ಇದನ್ನು ದಯವಿಟ್ಟು ಶೇರ್‌ ಮಾಡಬೇಡಿ ಎಂದು ರಶ್ಮಿಕಾ-ವಿಜಯ್‌ ಟೀಂ ಹೇಳಿದೆ.

ಮದುವೆಯಲ್ಲಿ ಸೆಲೆಬ್ರಿಟಿಗಳು ಇರುತ್ತಾರೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಅವರನ್ನು ನೋಡೋದಕ್ಕೆ ಆಗೋದಿಲ್ಲ. ಏನಾದ್ರೂ ಹೆಚ್ಚು ಕಡಿಮೆ ಆದರೆ ಹೊಣೆ ನಮ್ಮದೇ. ದಯವಿಟ್ಟು ಯಾರೂ ಇದನ್ನು ಶೇರ್‌ ಮಾಡಬೇಡಿ ಎಂದು ಅವರ ಟೀಂ ಹೇಳಿದೆ.

ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಈ ಮದುವೆ ನಡೆಯುತ್ತಿದೆ. ಸೆಲೆಬ್ರಿಟಿಗಳಿಗಾಗಿ ಹೈದರಾಬಾದ್‌ನಲ್ಲಿ ರಿಸೆಪ್ಷನ್‌ ಇಟ್ಟುಕೊಳ್ಳಲಾಗಿದೆ.

Must Read