May 2, 2026
Saturday, May 2, 2026
spot_img

ಈ ಬಾವಿಯಲ್ಲಿ ಪ್ರತಿಬಿಂಬ ಕಾಣಿಸದಿದ್ದರೆ ಆರೇ ತಿಂಗಳಲ್ಲಿ ಪ್ರಾಣ ಹೋಗುತ್ತದಂತೆ!

ವಾರಾಣಸಿಯಲ್ಲಿ ಚಂದ್ರಕೂಪ ಬಾವಿ ಎನ್ನುವ ನಿಗೂಢ ಬಾವಿಯಿದೆ. ಈ ಬಾವಿಯಲ್ಲಿ ಬಗ್ಗಿ ನೋಡಿದರೆ ನಮ್ಮ ಪ್ರತಿಬಿಂಬ ಕಾಣಬೇಕು, ಕಾಣದಿದ್ದಲ್ಲಿ ಸಾವು ಹತ್ತಿರವಿದೆ ಎಂದರ್ಥವಂತೆ!

ಹೌದು, ಕಾಶಿ ವಿಶ್ವನಾಥ ದೇವಾಲಯದ ಸಮೀಪ ಇರುವ ಸಿದ್ಧೇಶ್ವರಿ ಮಂದಿರದ ಮೈದಾನದಲ್ಲಿ ಈ ಬಾವಿ ಇದೆ. ಜನ ಭಯದಿಂದಲೇ ಈ ಬಾವಿಯಲ್ಲಿ ಬಗ್ಗಿ ನೋಡುತ್ತಾರೆ.

ಚಂದ್ರನು ಶಿವ ದೇವರನ್ನು ಮೆಚ್ಚಿಸಲು ಈ ಬಾವಿಯನ್ನು ನಿರ್ಮಿಸಿದನು ಎಂದು ಹೇಳಲಾಗುತ್ತದೆ. ಅದಕ್ಕೆ ಈ ಬಾವಿಗೆ ಚಂದ್ರಕೂಪ್‌ ಎಂದು ಹೆಸರು ಬಂದಿದೆ. ಈ ಬಾವಿಯಲ್ಲಿ ಸಾವನ್ನು ಮುನ್ಸೂಚಿಸುವ ಮಾಂತ್ರಿಕ ಶಕ್ತಿ ಇದೆ ಎಂದು ಹೇಳಲಾಗಿದೆ. ಸ್ಕಂದ ಪುರಾಣದ ಕಾಶಿ ಖಂಡದಲ್ಲಿ ಇದರ ಉಲ್ಲೇಖವಿದೆ.

ಭಕ್ತರು ವಿಶೇಷವಾಗಿ ಪೂರ್ಣಿಮಾ ಮತ್ತು ಅಮಾವಾಸ್ಯೆಯ ಸಮಯದಲ್ಲಿ, ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ನವಗ್ರಹ ಶಿವಲಿಂಗಗಳಲ್ಲಿ ಒಂಬತ್ತು ಶಿವಲಿಂಗಗಳಲ್ಲಿ ಒಂದಾದ ಚಂದ್ರೇಶ್ವರ ಲಿಂಗವನ್ನು ಪ್ರಾರ್ಥಿಸಲು ಜನರು ಇಲ್ಲಿಗೆ ಬರುತ್ತಾರೆ.

ಇನ್ನು ಬಾವಿಯಲ್ಲಿ ಬಗ್ಗಿ ನೋಡುವುದರಿಂದ ಮನಸ್ಸು, ದೇಹ ಹಾಗೂ ಆತ್ಮ ಶುದ್ಧವಾಗುತ್ತದೆ ಎನ್ನುವ ನಂಬಿಕೆಯೂ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !