June 5, 2026
Friday, June 5, 2026
spot_img

PARENTING | ಮಕ್ಕಳನ್ನು ಮಣ್ಣಲ್ಲಿ ಆಡೋಕೆ ಬಿಡದೇ ಪರಿಸರವನ್ನು ಪ್ರೀತಿಸಿ ಅಂದ್ರೆ ಹೇಗೆ? ಗಲೀಜಾಗೋಕೆ ಬಿಡಿ ಸ್ವಾಮಿ

ಮಕ್ಕಳ ಶಾಲೆಯಲ್ಲಿ ಗ್ರೀನ್‌ ಡ್ರೆಸ್‌ ಹಾಕಿಕೊಂಡು ಬನ್ನಿ ಎಂದು ಹೇಳ್ತಾರೆ. ಅವರು ಹೇಳಿದಂತೆಯೇ ಹಸಿರು ಡ್ರೆಸ್‌ ಹಾಕಿ ಮಕ್ಕಳನ್ನು ಕಳಿಸಿದ್ರೆ ಆಯ್ತು. ಅಲ್ಲಿಗೆ ನಮ್ಮ ಪರಿಸರ ದಿನ ಮುಕ್ತಾಯವಾಗುತ್ತದೆ. ಆದರೆ ಇದರಿಂದ ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ ಮೂಡ್ತಾ ಇದೆಯಾ? ಮಕ್ಕಳು ಹಸಿರನ್ನು ಇಷ್ಟಪಡ್ತಾ ಇದ್ದಾರಾ? ಮಕ್ಕಳನ್ನು ಪ್ರಕೃತಿಯ ಹತ್ತಿರಕ್ಕೆ ತರೋದಕ್ಕೆ ಈ ರೀತಿ ಮಾಡಿ..

ಮಕ್ಕಳನ್ನು ಮಣ್ಣಲ್ಲಿ ಆಡಲು ಬಿಡಿ. ಗಲೀಜಾದ್ರೆ ಆಗ್ಲಿ ಬಿಟ್ಬಿಡಿ. ಕಲ್ಲು, ಮಣ್ಣು, ನೀರಿನಲ್ಲಿ ಏನು ಆಟ ಆಡ್ತಾರೋ ಆಟಾಡಲು ಬಿಟ್ಬಿಡಿ.

ಎಷ್ಟೇ ದೊಡ್ಡ ಬಂಗಲೆ ನಿಮ್ಮದಾಗಿರಲಿ, ಪುಟ್ಟ ಒನ್‌ ಬಿಎಚ್‌ಕೆ ಇರಲಿ. ಗಿಡ ಬೆಳೆಸೋದು, ತರಕಾರಿ ಎಲ್ಲಿಂದ ಬರುತ್ತದೆ ಎನ್ನುವ ವಿಷಯ ಮಕ್ಕಳಿಗೆ ತಿಳಿದಿರಲಿ.

ಮಕ್ಕಳನ್ನು ಮಾಲ್‌, ಫನ್‌ ಇರುವ ಜಾಗಗಳಲ್ಲಿಗೆ ಕರೆದುಕೊಂಡು ಹೋಗುವ ಜೊತೆಗೆ ನಿಸರ್ಗಕ್ಕೆ ಸಂಬಂಧಿಸಿದ ಸ್ಥಳಗಳಿಗೂ ಕರೆದುಕೊಂಡು ಹೋಗಿ. ನೀರು, ಗಾಳಿ, ವಾತಾವರಣ ಎಲ್ಲವನ್ನೂ ಮಕ್ಕಳು ಇಷ್ಟಪಡಲಿ.

ಮನೆಯಲ್ಲಿ ನೇಚರ್‌ಗೆ ಸಂಬಂಧಿಸಿದ ಪುಸ್ತಕಗಳು, ಮನೆಯಲ್ಲಿ ಗಿಡಗಳನ್ನು ಇಡಿ. ಇನ್ನು ಮನೆಯಲ್ಲಿ ಸ್ವಲ್ಪ ಜಾಗ ಸಿಕ್ಕರೂ ಅಲ್ಲಿ ಸಣ್ಣ ಪುಟ್ಟ ಗಿಡಗಳನ್ನು ಬೆಳೆಸಿ, ಮಕ್ಕಳಿಗೆ ಅದರ ಮೇಂಟೇನೆನ್ಸ್‌ ನೀಡಿ.

ಪಕ್ಷಿಗಳು, ಹೂವುಗಳು, ಹರಿಯುವ ನೀರು ಇಂತವುಗಳನ್ನು ನೀವು ಕೂಡ ನೋಡಿ ಉತ್ಸಾಹ ತೋರಿಸಿ. ಅವರಿಗೂ ಕೂಡ ಉತ್ಸಾಹ ಬರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !