May 22, 2026
Friday, May 22, 2026
spot_img

‘ದೃಶ್ಯಂ 3’ ಸಿನಿಮಾ ಭರ್ಜರಿ ಪ್ರದರ್ಶನ: ಅಭಿಮಾನಿಗಳ ಪ್ರೀತಿ ಕಂಡು ಕಣ್ಣೀರು ಹಾಕಿದ ನಟ ಮೋಹನ್‌ಲಾಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳಿಂದ ಉತ್ತಮ ಮೆಚ್ಚುಗೆ ಗಳಿಸುತ್ತಿದೆ.

ದುಬೈನಲ್ಲೂ ಅದ್ಭುತ ಪ್ರತಿಕ್ರಿಯೆ

ಇತ್ತ ದುಬೈನಲ್ಲೂ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿದ್ದು, ಈ ವೇಳೆ ಅಭಿಮಾನಿಗಳಿಂದ ವ್ಯಕ್ತವಾದ ಅದ್ಭುತ ಪ್ರತಿಕ್ರಿಯೆಯನ್ನು ಕಂಡು ಮೋಹನ್‌ಲಾಲ್ ಭಾವುಕರಾಗಿದ್ದಾರೆ.

ಎದ್ದು ನಿಂತು ಚಪ್ಪಾಳೆ ತಟ್ಟಿದ ಪ್ರೇಕ್ಷಕರು

ಸಿನಿಮಾದಲ್ಲಿ ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಮತ್ತೊಮ್ಮೆ ಮಿಂಚಿರುವ ಮೋಹನ್‌ಲಾಲ್ ಅವರ ಅಭಿನಯಕ್ಕೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು. ಈ ಪ್ರೀತಿ ಕಂಡು ಕಣ್ಣೀರು ಹಾಕಿದರು.

ಖುಷಿಯಲ್ಲಿ ಕಣ್ಣೀಟ್ಟ ಮೋಹನ್‌ಲಾಲ್

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಡೀ ಚಿತ್ರಮಂದಿರದಲ್ಲಿದ್ದ ಜನರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ, ಶಿಳ್ಳೆ ಹೊಡೆಯುತ್ತಾ ಮೋಹನ್‌ಲಾಲ್ ಅವರಿಗೆ ಗೌರವ ಸಲ್ಲಿಸಿದರು. ಮೋಹನ್‌ಲಾಲ್ ಕೈಮುಗಿದು ಎಲ್ಲರಿಗೂ ಧನ್ಯವಾದ ಹೇಳುತ್ತಾ, ಖುಷಿಯ ಕಣ್ಣೀರು ಒರೆಸಿಕೊಳ್ಳುತ್ತಿರುವುದು ಸೆರೆಯಾಗಿದೆ.

ಜೀತು ಜೋಸೆಫ್ ನಿರ್ದೇಶನದ ‘ದೃಶ್ಯಂ 3’, ಥ್ರಿಲ್ಲರ್ ಸಿನಿಮಾವಾಗಿದ್ದು, ಮೋಹನ್‌ಲಾಲ್ ಅವರ ಜಾರ್ಜ್‌ಕುಟ್ಟಿ ಪಾತ್ರವು ಭಾವನಾತ್ಮಕ ತೀವ್ರತೆಗಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಆರಂಭ

ಈಗಾಗಲೇ ‘ದೃಶ್ಯಂ 3’ ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಆರಂಭ ಪಡೆದಿದೆ. ಸಿನಿಮಾ ಮೊದಲ ದಿನ ಮಲಯಾಳಂ ಒಂದರಲ್ಲೇ 3,503 ಸ್ಕ್ರೀನ್‌ಗಳಲ್ಲಿ 13.70 ಕೋಟಿ ಕಲೆಕ್ಷನ್ ಮಾಡಿದೆ. ತೆಲುಗಿನಲ್ಲಿ 1.50 ಕೋಟಿ, ಕನ್ನಡದಲ್ಲಿ 20 ಲಕ್ಷ ಮತ್ತು ತಮಿಳಿನಲ್ಲಿ 45 ಲಕ್ಷ ಗಳಿಸಿದೆ. ವಿದೇಶಗಳಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಾಗರೋತ್ತರ ಗಳಿಕೆ ಕೂಡ ಒಟ್ಟು ಕಲೆಕ್ಷನ್‌ಗೆ ದೊಡ್ಡ ಕೊಡುಗೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !