October 16, 2026
Friday, October 16, 2026
spot_img

ಎಬೊಲಾ ವೈರಸ್ ಆತಂಕ: ದೆಹಲಿಯಲ್ಲಿ ನಡೆಯಬೇಕಿದ್ದ ಭಾರತ-ಆಫ್ರಿಕಾ ಶೃಂಗಸಭೆ ಮುಂದೂಡಿಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕ್ಕೆ ಎಬೊಲಾ ವೈರಸ್ ಭೀತಿ ಶುರುವಾಗಿದ್ದು, ಆಫ್ರಿಕಾದ ಕಾಂಗೋದಲ್ಲಿ ಈಗಾಗಲೇ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇದರ ಬೆನ್ನಲ್ಲೇ ಭಾರತ ಸರಕಾರ ಮಹತ್ವದ ನಿರ್ಧಾರ ತೆಗೆದುಗೊಂಡಿದೆ.

ಶೃಂಗಸಭೆ ಮುಂದೂಡಿಕೆ

ಆಫ್ರಿಕಾದ ಕಾಂಗೋದಲ್ಲಿ ಎಬೋಲಾ ವೈರಸ್ ದಿನೇ ದಿನೇ ಹೆಚ್ಚುತ್ತಿರುವ ಕಾರಣ, ಮೇ.28 ರಂದು ದೆಹಲಿಯಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಆಫ್ರಿಕಾ ಯೂನಿಯನ್ ಶೃಂಗಸಭೆಯನ್ನು ಮುಂದೂಡಲಾಗಿದೆ.

ತುರ್ತು ಪರಿಸ್ಥಿತಿ ಘೋಷಣೆ

ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ, ಎಬೋಲಾ ವೈರಸ್ ಸ್ಫೋಟದಿಂದ ತುರ್ತು ಪರಿಸ್ಥಿತಿ ಘೋಷಿಸಿದ್ದು, ಜಗತ್ತು ಕಟ್ಟು ನಿಟ್ಟಿನ ಮಾರ್ಗಸೂಚಿಯನ್ನು ಪಾಲನೆ ಮಾಡುವಂತೆ ತಿಳಿಸಿದೆ. ಈ ಬೆನ್ನಲ್ಲೇ ಭಾರತ ಹಾಗೂ ಆಫ್ರಿಕಾ ದೇಶಗಳ ನಾಲ್ಕನೇ ಶೃಂಗಸಭೆಯನ್ನು ಮುಂದೂಡಿದೆ.

ಕಾಂಗೋ ಸೇರಿದಂತೆ ಆಫ್ರಿಕಾ ದೇಶದಲ್ಲಿ ಕೊರೋನಾ ಸಂದರ್ಭದಲ್ಲಿನ ಮಾರ್ಗಸೂಚಿಗಳು ಮತ್ತೆ ಜಾರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ವೈದ್ಯರ ತಂಡಗಳು ನಿರಂತರ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿದೆ.

ಭಾರತದಲ್ಲಿ ಹದ್ದಿನ ಕಣ್ಣಿಟ್ಟ ಆರೋಗ್ಯ ಇಲಾಖೆ

ಇತ್ತ ಭಾರತದಲ್ಲೂ ಎಚ್ಚರಿಕೆ ನೀಡಲಾಗಿದ್ದು,ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಆಫ್ರಿಕಾ ದೇಶಗಳಿಂದ ಯಾವುದೇ ರೀತಿಯಲ್ಲಿ ಭಾರತಕ್ಕೆ ಎಬೋಲಾ ವೈರಸ್ ಹರಡದಂತೆ ಮುನ್ನಚ್ಚರಿಕೆ ವಹಿಸಲಾಗುತ್ತಿದೆ.

Must Read