July 19, 2026
Sunday, July 19, 2026
spot_img

ಸರ್ಕಾರಿ ಶಾಲೆಗಳ ಓದಿಗೆ ಚುನಾವಣಾ ಗ್ರಹಣ: ಶೇ.30 ರಷ್ಟು ಶಿಕ್ಷಕರು SIR ಕರ್ತವ್ಯಕ್ಕೆ ನಿಯೋಜನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಕೇವಲ ಮೂರೇ ವಾರ ಕಳೆಯುವಷ್ಟರಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಬಿಗ್ ಶಾಕ್ ಎದುರಾಗಿದೆ. ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (SIR) ಕಾರ್ಯಕ್ರಮಕ್ಕಾಗಿ ರಾಜ್ಯದ ಸುಮಾರು ಶೇಕಡಾ 30 ರಷ್ಟು ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿಗಳಾಗಿ (BLO) ನಿಯೋಜಿಸಲಾಗಿದೆ. ಇದರ ಪರಿಣಾಮವಾಗಿ ಸಾವಿರಾರು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಹಳಿ ತಪ್ಪಿವೆ.

 ‘ಶಾಲೆಗೆ ಬರೋದು, ಊಟ ಮಾಡೋದು, ಮನೆಗೆ ಹೋಗೋದು!’

ಬೆಂಗಳೂರಿನ ಹಲವು ಪ್ರಾಥಮಿಕ ಶಾಲೆಗಳಲ್ಲಿ ಕೇವಲ ಒಬ್ಬರು ಅಥವಾ ಇಬ್ಬರು ಶಿಕ್ಷಕರನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ಚುನಾವಣಾ ತರಬೇತಿ ಮತ್ತು ಸಮೀಕ್ಷೆಗೆ ನಿಯೋಜಿಸಲಾಗಿದೆ. ಮಕ್ಕಳನ್ನು ನಿಯಂತ್ರಣದಲ್ಲಿಡಲು ಬೇರೆ ಬೇರೆ ತರಗತಿಗಳ ವಿದ್ಯಾರ್ಥಿಗಳನ್ನು ಒಂದೇ ಕೋಣೆಯಲ್ಲಿ ಕೂರಿಸಲಾಗುತ್ತಿದೆ. ಯಾವುದೇ ವಿಷಯಗಳ ಬೋಧನೆ ನಡೆಯುತ್ತಿಲ್ಲ.

ಪೋಷಕರ ಆಕ್ರೋಶ:

 ಶಾಲೆಗಳು ಈಗ ಕೇವಲ ಮಧ್ಯಾಹ್ನದ ಬಿಸಿಯೂಟದ ಕೇಂದ್ರಗಳಾಗಿ ಮಾರ್ಪಟ್ಟಿವೆ. ಮಕ್ಕಳು ಶಾಲೆಗೆ ಬಂದು, ಊಟ ಮಾಡಿ ಮನೆಗೆ ಮರಳುತ್ತಿದ್ದಾರೆ ಎಂದು ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (SDMC) ಸದಸ್ಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಜೂನ್ 30 ರಿಂದ ಆಗಸ್ಟ್ 8 ರವರೆಗೆ ಮನೆ ಮನೆ ಸಮೀಕ್ಷೆ

ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಜೂನ್ 30 ರಿಂದ ಆಗಸ್ಟ್ 8 ರವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಜೂನ್ 20 ರಿಂದಲೇ ಇವರಿಗೆ ತರಬೇತಿ ಆರಂಭವಾಗಿದ್ದರಿಂದ ಶಾಲೆಗಳಲ್ಲಿ ಪಾಠಗಳು ಸ್ಥಗಿತಗೊಂಡಿವೆ. ಇದೇ ವರ್ಷದ ಕೊನೆಯಲ್ಲಿ ಜಿಬಿಎ (GBA) ಚುನಾವಣೆ ಮತ್ತು ಜನಗಣತಿ ಪ್ರಕ್ರಿಯೆಗಳೂ ಇರುವುದರಿಂದ ಇಡೀ ಶೈಕ್ಷಣಿಕ ವರ್ಷವೇ ವ್ಯರ್ಥವಾಗುವ ಭೀತಿ ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !