May 20, 2026
Wednesday, May 20, 2026
spot_img

GBA ಅಧಿಕಾರಿಗಳ ಹೆಸರಿನಲ್ಲಿ ಪಂಗನಾಮ: ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿ ಹಣ ಪೀಕುತ್ತಿರುವ ವಂಚಕರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ ಸಂಘಟಿತ ಸೈಬರ್ ವಂಚನೆ ಜಾಲ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆಗಳನ್ನು ಸೃಷ್ಟಿಸಿ, ಹಣಕಾಸು ಸಹಾಯ ಕೇಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.

ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ಹಲವು ಆಯುಕ್ತರ ಫೋಟೋಗಳನ್ನು ಬಳಸಿಕೊಂಡು ನಕಲಿ ಪ್ರೊಫೈಲ್‌ಗಳನ್ನು ರಚಿಸಲಾಗಿದೆ. ಈ ಖಾತೆಗಳಿಂದ ಸಿಬ್ಬಂದಿಗೆ ತುರ್ತು ಹಣಕಾಸು ಸಹಾಯ ಅಥವಾ ವೈಯಕ್ತಿಕ ಮಾಹಿತಿ ಕೇಳುವ ಸಂದೇಶಗಳನ್ನು ಕಳುಹಿಸಲಾಗುತ್ತಿದೆ.

ಪೂರ್ವ, ಉತ್ತರ, ದಕ್ಷಿಣ ಮತ್ತು ಕೇಂದ್ರ ವಲಯಗಳ ಆಯುಕ್ತರ ಹೆಸರಿನಲ್ಲಿಯೂ ಇದೇ ರೀತಿ ವಂಚನೆ ನಡೆದಿದ್ದು, ಭಾರತೀಯ ಹಾಗೂ ವಿದೇಶಿ ಸಂಖ್ಯೆಗಳ ಮೂಲಕ ಸಂಪರ್ಕ ಸಾಧಿಸಲಾಗಿದೆ. ಕೆಲವರು ಅನುಮಾನಗೊಂಡು ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆ ಪ್ರಕರಣ ಬಹಿರಂಗವಾಗಿದೆ.

ಇದನ್ನೂ ಓದಿ:

ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಹಲವು ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅಧಿಕಾರಿಗಳು ಯಾವುದೇ ಅಪರಿಚಿತ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರೂ ಸಹ ಇಂತಹ ಸಂದೇಶಗಳಿಂದ ದೂರವಿರಬೇಕು. ಅನುಮಾನಾಸ್ಪದ ಕರೆ ಅಥವಾ ಮೆಸೇಜ್ ಕಂಡುಬಂದರೆ ತಕ್ಷಣ ಹೆಲ್ಪ್‌ಲೈನ್ 1533 ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !