ಹೊಸದಿಗಂತ ವರದಿ ರಾಮನಗರ:
ಬಿಡದಿ ಭೂಸ್ವಾಧೀನ ವಿರೋಧಿಸಿ ಬೈರಮಂಗಲದ ಆಂಜನೇಯ ಸ್ವಾಮಿ ದೇವಸ್ಥಾನ ವೃತ್ತದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ದೂರವಾಣಿ ಮೂಲಕ ಕರೆ ಮಾಡಿ ಧೈರ್ಯ ತುಂಬಿದರು.
ರೈತರ ಭೂಮಿ ಉಳಿಸಲು ನಾನು ನಿಮ್ಮ ಜೊತೆ ಇರ್ತೇನೆ… ಜೈಲಿಗೆ ಹೋಗಲಿಕ್ಕೂ ತಯಾರಾಗಿದ್ದೇನೆ” ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರೈತರಿಗೆ ಸಂದೇಶ ಕೊಟ್ಟಿದ್ದಾರೆ.
ಉಪವಾಸ ನಿರತ ರೈತರ ಆರೋಗ್ಯ ವಿಚಾರಿಸಿ ಮಾತನಾಡಿದ ದೇವೇಗೌಡರು, ನಿಮ್ಮ ಭೂಮಿ ಉಳಿಸಲು ಯಾವುದೇ ತ್ಯಾಗಕ್ಕೂ ನಾನು ಸಿದ್ಧ, ಹೆದರಬೇಡಿ ಎಂದು ಅಭಯ ನೀಡಿದರು.
ಇದನ್ನೂ ಓದಿ:
ಇದೇ ವೇಳೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬೈರಮಂಗಲಕ್ಕೆ ಭೇಟಿ ನೀಡಿ, ಉಪವಾಸ ನಿರತ ರೈತರ ಆರೋಗ್ಯ ವಿಚಾರಿಸಿ, ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು. ರೈತರ ಜೊತೆ ನೆಲದ ಮೇಲೆ ಕುಳಿತು ಸಮಸ್ಯೆ ಆಲಿಸಿದರು.
ದೇವೇಗೌಡರ ಸಂದೇಶವನ್ನು ರೈತರಿಗೆ ತಲುಪಿಸಿದ ನಿಖಿಲ್, ರೈತರ ನ್ಯಾಯಯುತ ಹೋರಾಟದಲ್ಲಿ ನಮ್ಮ ಕುಟುಂಬ ನಿಮ್ಮ ಜೊತೆಗಿದೆ ಎಂದು ಭರವಸೆ ನೀಡಿದರು. ಫಲವತ್ತಾದ ಕೃಷಿ ಭೂಮಿ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಸರ್ಕಾರದ ಕ್ರಮದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.



