July 27, 2026
Monday, July 27, 2026
spot_img

ಮಗ ಗೋಲ್ಡ್‌ ಮೆಡಲ್‌ ತೆಗೆದುಕೊಳ್ಳೋದನ್ನು ನೋಡೋಕೆ ಬರುತ್ತಿದ್ದ ತಂದೆ ಅಪಘಾತದಲ್ಲಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಲೇಜಿನ ಘಟಿಕೋತ್ಸವದಲ್ಲಿ ಭಾಗಿಯಾಗಿ, ಮಗ ಗೋಲ್ಡ್‌ ಮೆಡಲ್‌ ತೆಗೆದುಕೊಳ್ಳೋದನ್ನು ನೋಡೋಕೆ ಬರುತ್ತಿದ್ದ ವೇಳೆ ಅಪಘಾತದಲ್ಲಿ ತಂದೆ ಮೃತಪಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಬೇಕಿದ್ದ ಶಿವಕುಮಾರ್‌ ಸಕ್ಸೇನಾ ಆಟೋ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಉಜ್ಜಯನಿಯಲ್ಲಿದ್ದ ಶಿವಕುಮಾರ್‌ ಸಕ್ಸೇನಾ ಹಾಗೂ ಪತ್ನಿ ಮಾಲತಿ ಸಕ್ಸೇನಾ ಬರೋಬ್ಬರಿ 896 ಕಿ.ಮೀ ದೂರ ಪ್ರಯಾಣ ಮಾಡಿ ಮಗನಿಗಾಗಿ ಬರುತ್ತಿದ್ದರು. ಮಗ ದಿವ್ಯಾಂಶು ಸಕ್ಸೇನಾ ಓದುತ್ತಿದ್ದ ಕಲಬುರಗಿಗೆಗೆ ಬಂದಿದ್ದು, ಯುನಿವರ್ಸಿಟಿಗೆ ಹೋಗೋಕೆ ಆಟೋ ಹತ್ತಿದ್ದರು. ಇನ್ನೇನು ಕಾಲೇಜು ತಲುಪಬೇಕು ಎನ್ನುವ ವೇಳೆಗೆ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಮಗನ ಗೋಲ್ಡ್‌ ಮೆಡಲ್‌ ಸಂಭ್ರಮ ನೋಡೋದಕ್ಕೆ ಕಾಯುತ್ತಿದ್ದ ದಂಪತಿ ಇನ್ನೇನು ಕಾಲೇಜಿಗೆ ನಾಲ್ಕು ಕಿಲೋಮೀಟರ್‌ ಅಷ್ಟೇ ಇದೆ ಎನ್ನುವಾಗ ಅಪಘಾತಕ್ಕೀಡಾಗಿದ್ದಾರೆ. ರಸ್ತೆ ಸರಿ ಇರಲಿಲ್ಲ ಹಾಗೂ ಚಾಲಕನ ವೇಗವೂ ಹೆಚ್ಚಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ದಿವ್ಯಾಂಶು ತಾಯಿ ಮಾಲತಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಕಾಲೇಜು ದಿವ್ಯಾಂಶು ತಂದೆಯ ಸಾವಿನಿಂದ ಆಘಾತಕ್ಕೊಳಗಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !