October 11, 2026
Sunday, October 11, 2026
spot_img

SHOCKING | ಮಾವ ತಂದೆ ಸಮಾನ ಅಂತಾರೆ, ಆದರೆ ಆತನೇ ಲೈಂಗಿಕ ಕಿರುಕುಳ ಕೊಟ್ರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತನ್ನ ಪತಿಯ ತಂದೆಯನ್ನು ತನ್ನ ತಂದೆ ಎಂದುಕೊಂಡು ಮನೆಗೆ ಬಂದ ಸೊಸೆಗೆ ಶಾಕ್‌ ಕಾದಿತ್ತು. ಯಾರೂ ಇಲ್ಲದ ವೇಳೆ ಸೊಸೆಗೆ ಮಾವನೇ ಲೈಂಗಿಕ ಕಿರುಕುಳ ನೀಡುತ್ತಿದ್ದ!

ಇದು ಯಾವುದೋ ಕ್ರೈಂ ಕಥೆಯ ಸಾಲುಗಳಲ್ಲಿ ನಿಜವಾದ ಘಟನೆ. ಬೆಂಗಳೂರಿನ ಆರ್‌ಟಿ ನಗರದಲ್ಲಿ ಮಾವನ ದುರ್ವರ್ತನೆಯಿಂದ ಬೇಸತ್ತ ಸೊಸೆ ದೂರು ನೀಡಿದ್ದಾಳೆ.

ಆರ್.ಟಿ.ನಗರದ ನಿವಾಸಿಯಾಗಿರುವ ಅಬ್ದುಲ್ ಹಫೀಜ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಆರೋಪಿಯು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಫೌಂಡರ್ ಆಗಿದ್ದು, ಸಮಾಜದಲ್ಲಿ ಗೌರವಯುತ ಸ್ಥಾನ ಹೊಂದಿದ್ದಾರೆ. ಆದರೆ ಮನೆಯಲ್ಲಿ ಕಾಮುಕನಂತ ವರ್ತಿಸುತ್ತಾರೆ ಎಂದು ಸೊಸೆ ಹೇಳಿದ್ದಾರೆ.

ಸೊಸೆಯ ಸೌಂದರ್ಯದ ಬಗ್ಗೆ ಅಶ್ಲೀಲವಾದ ಪತ್ರ ಬರೆದು, ಆಕೆಯ ಎದುರೇ ಓದಿ ನಗುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪತ್ನಿ ತನ್ನ ಪತಿಗೆ ಹೇಳಿದ್ದಾಳೆ. ಆಗ ಮಗನೂ ತಂದೆಗೆ ಬುದ್ಧಿ ಹೇಳಿದ್ದಾನೆ. ಆದರೂ ಮಾವ ಮತ್ತೆ ಮತ್ತೆ ಅದೇ ಕೆಲಸ ಮಾಡಿದ್ದಾನೆ.

ಲಿಫ್ಟ್‌ನಲ್ಲಿ ಇಬ್ಬರೇ ಇದ್ದ ವೇಳೆ ಲೈಂಗಿಕ ದೌರ್ಜನ್ಯ ಎಸಗಲು ನಿರ್ಧರಿಸಿದ್ದಾನೆ. ಇದೆಲ್ಲದರಿಂದ ಬೇಸತ್ತ ಮಹಿಳೆ ದೂರು ನೀಡಿದ್ದಾಳೆ. ವಿಚಾರಣೆ ನಡೆಯುತ್ತಿದೆ.

Must Read