April 26, 2026
Sunday, April 26, 2026
spot_img

ಮೆಟ್ರೋ ಸಿಬ್ಬಂದಿ ವಸತಿಗೃಹದಲ್ಲಿ ಅಗ್ನಿ ಅವಘಡ: ಬಾಲಕಿ ಸೇರಿ ಮೂವರು ಸಜೀವ ದಹನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯ ಮೆಟ್ರೋ ಸಿಬ್ಬಂದಿ ವಸತಿಗೃಹದಲ್ಲಿ ಬಾರೀ ಅಗ್ನಿ ಅವಘಡ ಸಂಭವಿಸಿದ್ದು, ಬಾಲಕಿ ಸೇರಿ ಮೂವರು ಸಜೀವ ದಹನವಾಗಿದ್ದಾರೆ.

ದೆಹಲಿಯ ಆದರ್ಶನಗರದಲ್ಲಿರುವ ವಸತಿಗೃಹದಲ್ಲಿ ಈ ಘಟನೆ ನಡೆದಿದೆ. ಪತಿ, ಪತ್ನಿ ಮತ್ತು ಬಾಲಕಿ ದುರಂತವಾಗಿ ಸಾವನ್ನಪ್ಪಿದ್ದಾರೆ.ಮೂವರ ಮೃತದೇಹಗಳನ್ನು ಸುಟ್ಟು ಕರಕಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಅಗ್ನಿ ಶಾಮಕದಳದ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ, ಬೆಳಗಿನ ಜಾವ 2.39ಕ್ಕೆ ಡಿಎಂಆರ್‌ಸಿ ಕ್ವಾರ್ಟರ್‌ನಲ್ಲಿರುವ ಗೃಹೋಪಯೋಗಿ ವಸ್ತುವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿ ಮಾಡಲಾಗಿತ್ತು, ನಂತರ ಆರು ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಐದನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದವರು ಬಂದಾಗ, ಮೂವರ ಸುಟ್ಟು ಕರಕಲಾದ ಶವಗಳು ಕಣ್ಣಿಗೆ ಬಿದ್ದಿದ್ದವು.

ಇದನ್ನೂ ಓದಿ: ಅತ್ತು ಹಗುರಾಗಲೂ ಬಿಡಲಿಲ್ಲ: paparazziಗಳ ವರ್ತನೆ ಕಂಡು ನೊಂದುಕೊಂಡ ಹೇಮಾ

ಮೃತರನ್ನು ಅಜಯ್ (42), ನೀಲಂ (38) ಮತ್ತು ಜಾನ್ಹವಿ (10) ಎಂದು ಗುರುತಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಡಿಎಂಆರ್‌ಸಿ ಕ್ವಾರ್ಟರ್ಸ್ ಮಜ್ಲಿಸ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಇದೆ. ಪತಿ, ಪತ್ನಿ ಮತ್ತು ಬಾಲಕಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಎಲ್ಲರೂ ಒಂದೇ ಕೋಣೆಯಲ್ಲಿ ಮಲಗಿದ್ದರು.

ಬೆಳಗ್ಗೆ 6.40 ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಮನೆಯ ವಸ್ತುಗಳು ಇದ್ದ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಳಗೆ ಮೂರು ಸುಟ್ಟ ದೇಹಗಳು ಪತ್ತೆಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !