October 18, 2026
Sunday, October 18, 2026
spot_img

Fitness Time | ವರ್ಕೌಟ್ ಮಾಡೋಕೆ ಬೆಸ್ಟ್ ಟೈಮ್ ಯಾವುದು?

ವರ್ಕೌಟ್ ಮಾಡೋಕೆ “ಒಂದು ಸರಿಯಾದ ಸಮಯವೇ ಬೆಸ್ಟ್” ಅಂತ ಹೇಳೋದು ಕಷ್ಟ. ಯಾಕಂದ್ರೆ ಪ್ರತಿಯೊಬ್ಬರ ದೇಹ, ಕೆಲಸದ ಶೆಡ್ಯೂಲ್ ಮತ್ತು ಎನರ್ಜಿ ಲೆವೆಲ್ ಬೇರೆ ಬೇರೆ. ಆದ್ರೆ ಬೆಳಗ್ಗೆ ಮತ್ತು ಸಂಜೆ ಎರಡಕ್ಕೂ ತಮ್ಮದೇ ಆದ ಲಾಭಗಳಿವೆ.

ಬೆಳಗ್ಗೆ ವರ್ಕೌಟ್

ಬೆಳಗ್ಗೆ ವ್ಯಾಯಾಮ ಮಾಡಿದ್ರೆ ದಿನದ ಆರಂಭವೇ ಆಕ್ಟಿವ್ ಆಗಿರುತ್ತದೆ. ಮೆಟಾಬಾಲಿಸಂ ಬೇಗ ಸ್ಟಾರ್ಟ್ ಆಗಿ ದಿನಪೂರ್ತಿ ಎನರ್ಜಿ ಲೆವೆಲ್ ಚೆನ್ನಾಗಿರುತ್ತದೆ. ಜೊತೆಗೆ ಬೆಳಗ್ಗೆ ಡಿಸ್ಟ್ರಕ್ಷನ್ಸ್ ಕಡಿಮೆ ಇರುವುದರಿಂದ consistency ಕೂಡ ಸುಲಭ.

ಸಂಜೆ ವರ್ಕೌಟ್

ಸಂಜೆ ಹೊತ್ತಿಗೆ ದೇಹದ ಶಕ್ತಿ ಮತ್ತು flexibility ಹೆಚ್ಚಾಗಿರುತ್ತದೆ. ಅದರಿಂದ ಹೆವಿ ವರ್ಕೌಟ್, ವೆಯಿಟ್ ಲಿಫ್ಟಿಂಗ್ ಅಥವಾ strength training ಚೆನ್ನಾಗಿ ಮಾಡಬಹುದು. ಕೆಲಸದ ಸ್ಟ್ರೆಸ್ ಕೂಡ ರಿಲೀಸ್ ಆಗುತ್ತದೆ.

ಇದನ್ನೂ ಓದಿ:

ಯಾವುದು ಬೆಸ್ಟ್?

ಫ್ಯಾಟ್ ಲಾಸ್ ಗುರಿ ಇದ್ದರೆ ಬೆಳಗ್ಗೆ ವಾಕ್ ಅಥವಾ ಲೈಟ್ workout ಒಳ್ಳೆಯದು. Muscle building ಅಥವಾ ಹೆವಿ ಟ್ರೈನಿಂಗ್ ಬೇಕಾದ್ರೆ ಸಂಜೆ ಹೆಚ್ಚು ಸೂಕ್ತ. ಆದರೆ ಕೊನೆಗೆ ಮುಖ್ಯವಾದದ್ದು ಟೈಮ್ ಅಲ್ಲ, consistency.

ಸಿಂಪಲ್ ರೂಲ್

ಯಾವ ಸಮಯದಲ್ಲಿ ನೀವು ನಿಯಮಿತವಾಗಿ ಮಾಡಬಲ್ಲಿರೋದು ಅದೇ ನಿಮ್ಮ best workout time.

Must Read