May 4, 2026
Monday, May 4, 2026
spot_img

ಪಂಚ ರಾಜ್ಯಗಳ ಚುನಾವಣೆ: ಕಮಲ ಅರಳಿದ ಖುಷಿಗೆ ಬಳ್ಳಾರಿಯಲ್ಲಿ ಬಿಜೆಪಿ ಸಂಭ್ರಮ

ಹೊಸದಿಗಂತ ವರದಿ ಬಳ್ಳಾರಿ:

ಪಶ್ಚಿಮ ಬಂಗಾಳ, ಪಾಂಡಿಚೇರಿ, ಅಸ್ಸಾಂನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಬಿಜೆಪಿ ಕಾರ್ಯಕರ್ತರು ನಗರದ ಹೃದಯ ಭಾಗ ರಾಯಲ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸೋಮವಾರ ವಿಜಯೋತ್ಸವ ಆಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಅವರು ಮಾತನಾಡಿ, ಪಂಚರಾಜ್ಯಗಳ ಚುನಾವಣೆಯಲ್ಲಿ ಅಸ್ಸಾಂ, ಪಾಂಡಿಚೇರಿ, ವಿಶೇಷವಾಗಿ ಪಶ್ಚಿಮ ಬಂಗಾಳ ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಈ ಗೆಲುವಿನ ಗಾಳಿ ರಾಜ್ಯಕ್ಕೂ ಬೀಸಲಿದೆ. ಇದು ದೇಶದ ಕಾರ್ಯಕರ್ತರ ಗೆಲುವಾಗಿದೆ. ರಾಜ್ಯದ ಮೇಲು ಈ ಗಾಳಿ ಬೀಸಲಿದೆ. ಈ ಫಲಿತಾoಶ ಗಮನಿಸಿದರೆ, ಇಡೀ ದೇಶ ಬಿಜೆಪಿ ಪರವಾಗಿದೆ, ಈ ಶಕ್ತಿ ರಾಜ್ಯ ಹಾಗೂ ಜಿಲ್ಲೆಯಲ್ಲಿ ಅಪ್ಪಳಿಸಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು ಮಾತನಾಡಿ, ನಮ್ಮ ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರ ಜನಪರ ಆಡಳಿತಕ್ಕೆ ಪಂಚರಾಜ್ಯಗಳ ಚುನಾವಣೆಯಲ್ಲಿ ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ, ಇದು ಸಂತಸ ಮೂಡಿಸಿದೆ. ಮೋದಿ ಅವರ ತಂತ್ರದಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಕಮಲ ಅರಳಿದ್ದು, ಸ್ವಂತ ಬಲದ ಮೇಲೆ ಅಧಿಕಾರ ಚುಕ್ಕಾಣಿ ಹಿಡಿದಿದೆ.ಈ ಗೆಲುವಿನ ಓಟ ರಾಜ್ಯದಲ್ಲೂ ಮುಂದುವರಿಯಲಿದ್ದು, ಮತ್ತೆ ನಾವು ಇದೇ ಸ್ಥಳದಲ್ಲೇ ಸಂಭ್ರಮಾಚರಣೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಂಸದ ಸಣ್ಣ ಫಕೀರಪ್ಪ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್, ಬುಡಾ ಮಾಜಿ ಅಧ್ಯಕ್ಷ ಮಾರುತಿ ಪ್ರಸಾದ್ ಸರ್ವಶೆಟ್ಟಿ, ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಕೆ.ಹನುಮಂತಪ್ಪ, ಗುಡಿಗಂಟೆ ಹನುಮಂತಪ್ಪ, ಬಿಜೆಪಿ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಹಂಪಿ ರಮಣ, ಡಾ.ಅರುಣಾ ಕಾಮಿನೇನಿ ಸೇರಿದಂತೆ ಅನೇಕ ಗಣ್ಯರು, ನೂರಾರು ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕೆ.ರಾಮಲಿಂಗಪ್ಪ, ಅಡವಿಸ್ವಾಮಿ, ಓಂ ಪ್ರಕಾಶ್, ಮಲ್ಲೇಶ್ ಕುಮಾರ್, ಎಚ್.ಓಬಳೇಶ್, ಹನುಮೇಶ ಉಪ್ಪಾರ, ಹಲಕುಂದಿ ವೀರನಗೌಡ, ಶಂಕ್ರಪ್ಪ, ರಾಘವೇಂದ್ರ ಎಸ್.ಚಲುವಾದಿ, ಹನುಮಂತಪ್ಪ ಕೋಳೂರು, ಎರಂಗಳಿ ತಿಮ್ಮಾರೆಡ್ಡಿ, ಶರಣು ಆರ್.ಸೋಮನಗೌಡ,
ರಬಿಯಾ, ಡಾ.ರೇಣುಕಾ ಸೇರಿದಂತೆ ವಿವಿಧ ಗಣ್ಯರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !