ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ದಿಕ್ಕಿನಲ್ಲಿ ಭಾರತ ಮಹತ್ವದ ಹೆಜ್ಜೆ ಇಡುತ್ತಿದೆ. ರಷ್ಯಾದಿಂದ ಅತ್ಯಾಧುನಿಕ S-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆಯ ನಾಲ್ಕನೇ ಘಟಕವು ಮುಂದಿನ ತಿಂಗಳ ಆರಂಭದಲ್ಲಿ ಭಾರತಕ್ಕೆ ತಲುಪುವ ಸಾಧ್ಯತೆ ಇದ್ದು, ಇದು ಭಾರತೀಯ ವಾಯುಪಡೆಯ ರಕ್ಷಣಾ ಕವಚವನ್ನು ಮತ್ತಷ್ಟು ಬಲಪಡಿಸಲಿದೆ.
2018ರಲ್ಲಿ ಭಾರತ ಮತ್ತು ರಷ್ಯಾ ನಡುವೆ ಐದು ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಒಪ್ಪಂದದಡಿ ಐದು ಘಟಕಗಳನ್ನು ಖರೀದಿಸಲು ಸಹಿ ಮಾಡಲಾಗಿತ್ತು. ಈ ಪೈಕಿ ಮೂರು ಘಟಕಗಳು ಈಗಾಗಲೇ ಸೇವೆಗೆ ಸೇರ್ಪಡೆಯಾಗಿದ್ದು, ನಾಲ್ಕನೇ ಘಟಕ ಶೀಘ್ರದಲ್ಲೇ ತಲುಪಲಿದೆ. ಐದನೇ ಘಟಕವನ್ನು ನವೆಂಬರ್ ವೇಳೆಗೆ ಹಸ್ತಾಂತರಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ:
ಈ ಕ್ಷಿಪಣಿ ವ್ಯವಸ್ಥೆ ದೂರದ ವ್ಯಾಪ್ತಿಯಲ್ಲೇ ಶತ್ರುಗಳ ಕ್ಷಿಪಣಿ ಮತ್ತು ಯುದ್ಧವಿಮಾನಗಳನ್ನು ಪತ್ತೆಹಚ್ಚಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇತ್ತೀಚಿನ ಭದ್ರತಾ ಕಾರ್ಯಾಚರಣೆಗಳಲ್ಲಿ ಇದರ ಪರಿಣಾಮಕಾರಿ ಪಾತ್ರ ಗಮನ ಸೆಳೆದಿದೆ.
ಇದರ ಜೊತೆಗೆ, ಹೆಚ್ಚುವರಿ ಐದು S-400 ಘಟಕಗಳ ಖರೀದಿಗೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ಭಾರತದ ವಾಯು ರಕ್ಷಣಾ ಶಕ್ತಿ ಮತ್ತಷ್ಟು ವಿಸ್ತರಿಸಲಿದೆ.



