ಮೇಷ
ಈ ದಿನ ನಿಮ್ಮದು. ಪೂರ್ಣವಾಗಿ ಆನಂದಿಸಿ. ಗುರಿ ಸಾಧನೆಯ ಹಾದಿ ಸುಗಮ. ವಾದಕ್ಕೆ ಕಿವಿಗೊಡಬೇಡಿ. ಕೌಟುಂಬಿಕ ಸಾಮರಸ್ಯ.
ವೃಷಭ
ಎಲ್ಲ ಕೆಲಸ ಸರಾಗವಾಗಿ ಸಾಗುವಂತೆ ಯೋಜನೆ ರೂಪಿಸಿ. ಸಮಸ್ಯೆ ಪರಿಹಾರ ಕಷ್ಟವಲ್ಲ, ಸಮಾಧಾನದ ನಡೆ ಅತ್ಯವಶ್ಯ.
ಮಿಥುನ
ವೃತ್ತಿಯಲ್ಲಿ ಫಲಪ್ರದ ಬೆಳವಣಿಗೆ. ನಿರ್ಧಾರ ಫಲ ನೀಡಲಿದೆ. ಹೊಸ ವಾಹನ ಖರೀದಿಯ ಬಯಕೆ ಈಡೇರುವ ಕಾಲ ಬಂದಿದೆ. ಧನಾಗಮ.
ಕಟಕ
ಶಾಂತಚಿತ್ತರಾಗಿ ಇಂದು ವರ್ತಿಸಿ. ಸಹನೆ ಕೆಣಕುವ ವಿದ್ಯಮಾನ ಉಂಟಾದೀತು. ಆಪ್ತರಿಂದ ವಿಶ್ವಾಸದ್ರೋಹ. ಭಾವಾವೇಶ ನಿಯಂತ್ರಿಸಿ.
ಸಿಂಹ
ಹೆಚ್ಚು ಫಲ ನೀಡದ ದಿನ. ಶ್ರಮ ವ್ಯರ್ಥ. ದೈಹಿಕ ನೋವು ಅನುಭವಿಸುವಿರಿ. ಧ್ಯಾನ, ಯೋಗ ನಿಮಗೆ ಸಹಕಾರಿಯಾದೀತು. ಆರ್ಥಿಕ ಒತ್ತಡ.
ಕನ್ಯಾ
ಕೆಲಸದ ಒತ್ತಡ, ನಿಮ್ಮ ದಿನಚರಿಯನ್ನು ಬದಲಿಸಬೇಕಾದೀತು. ಕುಟುಂಬಸ್ಥರ ಜತೆ ತಾಳ್ಮೆಯಿಂದ ವ್ಯವಹರಿಸಿ. ಆರ್ಥಿಕ ಹಿನ್ನಡೆ.
ತುಲಾ
ಆತ್ಮವಿಶ್ವಾಸ ಹೆಚ್ಚಿಸುವ ಬೆಳವಣಿಗೆ. ಗುರಿ ಸಾಧನೆಗೆ ಬದ್ಧರಾಗಿ. ನಿಮಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣ. ಬಂಧು ಜತೆ ಚಕಮಕಿ.
ವೃಶ್ಚಿಕ
ಕೆಲವರ ಮೇಲೆ ಅನುಮಾನ ಪಡುವ ಸ್ವಭಾವ ಬಿಟ್ಟುಬಿಡಿ. ಹಣದ ವಿಚಾರದಲ್ಲಿ ಮಹತ್ವದ ನಿರ್ಧಾರ ತಾಳಬೇಡಿ. ಕಾಯಿರಿ.
ಧನು
ಕೆಲವು ಪರಿಸ್ಥಿತಿಯ ಕಾರಣದಿಂದ ಆತ್ಮವಿಶ್ವಾಸ ಕುಂದುವುದು. ಹಿಂಜರಿಕೆ ಬಿಟ್ಟು ಕಾರ್ಯವೆಸಗಿ. ದೈವಬಲ ನಿಮಗಿದೆ. ಕಾರ್ಯಸಿದ್ಧಿ ಆಗಲಿದೆ.
ಮಕರ
ಎಂದಿಗಿಂತ ಹೆಚ್ಚು ಕೆಲಸದ ಒತ್ತಡ. ಯಾವುದೇ ವಿಚಾರಕ್ಕೆ ಅತಿರೇಕದ ಪ್ರತಿಕ್ರಿಯೆ ತೋರದಿರಿ. ತಾಳ್ಮೆ ತಪ್ಪಿ ವರ್ತಿಸಬೇಡಿ.
ಕುಂಭ
ಮನಸ್ಸಿಗೆ ಶಾಂತಿ ಬೇಕೆ? ಸಣ್ಣಪುಟ್ಟ ಸಂಘರ್ಷಗಳಿಂದ ದೂರ ಇರಿ. ಸಮಸ್ಯೆ ಸೃಷ್ಟಿಸುವ ವ್ಯಕ್ತಿಗಳನ್ನು ನಿಮ್ಮಿಂದ ದೂರ ಇಟ್ಟುಕೊಳ್ಳಿ.
ಮೀನ
ಏಕಾಗ್ರತೆ ಕಳಕೊಳ್ಳದೆ ನಿಮ್ಮ ಕೆಲಸ ಮಾಡಿ. ಸಮಯದೊಳಗೆ ಮುಗಿಸಿ. ಸಂಗಾತಿ ಜತೆ ವಾಗ್ವಾದ ನಡೆದೀತು. ತಾಳ್ಮೆ ಕಾಯ್ದುಕೊಳ್ಳಿರಿ.



