October 15, 2026
Thursday, October 15, 2026
spot_img

ಗಡಿ ದಾಟಿದ ‘ರಾಮಾಯಣ’ ಕ್ರೇಜ್: ಯಶ್ ಲುಕ್‌ಗೆ ಫಿದಾ ಆದ ಪಾಕಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ವಿಶ್ವದಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಈ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಲ್ಲಿನ ಯೂಟ್ಯೂಬರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ಚಿತ್ರದ ದೃಶ್ಯ ವೈಭವ, ತಂತ್ರಜ್ಞಾನ ಹಾಗೂ ಕಲಾವಿದರ ಅಭಿನಯವನ್ನು ಶ್ಲಾಘಿಸಿದ್ದಾರೆ.

ದೃಶ್ಯ ವೈಭವಕ್ಕೆ ಪಾಕ್ ಯೂಟ್ಯೂಬರ್‌ಗಳ ಮೆಚ್ಚುಗೆ

ಪಾಕಿಸ್ತಾನದ ಹಲವು ಡಿಜಿಟಲ್ ಕ್ರಿಯೇಟರ್‌ಗಳು ಟ್ರೇಲರ್ ವೀಕ್ಷಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಿತ್ರದ ಭವ್ಯ ನಿರ್ಮಾಣ, ಅದ್ಧೂರಿ VFX ಹಾಗೂ ಹಾಲಿವುಡ್ ಮಟ್ಟದ ದೃಶ್ಯ ಗುಣಮಟ್ಟವನ್ನು ಮೆಚ್ಚಿ ಮಾತನಾಡಿದ್ದು, ಇಂತಹ ಸಿನಿಮಾ ನಿರ್ಮಾಣ ಭಾರತೀಯ ಚಿತ್ರರಂಗದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಯಶ್, ರಣಬೀರ್ ಮತ್ತು ಸಾಯಿ ಪಲ್ಲವಿ ಪಾತ್ರಗಳಿಗೆ ಮೆಚ್ಚುಗೆ

ರಾವಣನ ಪಾತ್ರದಲ್ಲಿರುವ ಯಶ್ ಅವರ ಭವ್ಯ ಲುಕ್, ಶ್ರೀರಾಮನಾಗಿ ಕಾಣಿಸಿಕೊಂಡಿರುವ ರಣಬೀರ್ ಕಪೂರ್ ಅವರ ಪಾತ್ರ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಅವರ ಸರಳ ಅಭಿನಯ ಪ್ರೇಕ್ಷಕರ ಗಮನ ಸೆಳೆದಿದೆ. ಟ್ರೇಲರ್‌ನಲ್ಲಿರುವ ರಾಮ-ರಾವಣ ಮುಖಾಮುಖಿ ದೃಶ್ಯಗಳು ಹಾಗೂ ಭಾವನಾತ್ಮಕ ಕ್ಷಣಗಳು ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿವೆ.

Must Read