July 4, 2026
Saturday, July 4, 2026
spot_img

ಡಿಜಿಟಲ್ ಜಗತ್ತಿನಲ್ಲಿ Gen-Z ಯುವಕರ ಅಬ್ಬರ: ಇನ್‌ಸ್ಟಾಗ್ರಾಮ್ ಟ್ರೆಂಡಿಂಗ್‌ನಲ್ಲಿ ಧೂಳೆಬ್ಬಿಸುತ್ತಿದೆ CJP!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಷಿಯಲ್ ಮೀಡಿಯಾ ಇತಿಹಾಸದಲ್ಲೇ ಹಿಂದೆಂದೂ ಕಾಣದ ಭಾರಿ ಇಂಟರ್ನೆಟ್ ಕ್ರಾಂತಿಯೊಂದು ಸೃಷ್ಟಿಯಾಗಿದೆ. ದೇಶದ ಅತಿ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ ಸಂಖ್ಯೆಯನ್ನು ಕೇವಲ ನಾಲ್ಕೇ ದಿನಗಳಲ್ಲಿ ಹಿಂದಿಕ್ಕುವ ಮೂಲಕ ವಿಡಂಬನಾತ್ಮಕ ಆನ್‌ಲೈನ್ ಆಂದೋಲನ ‘ಕಾಕ್ರೋಚ್ ಜನತಾ ಪಾರ್ಟಿ’ ಹೊಸ ದಾಖಲೆ ಬರೆದಿದೆ.

ಯುವ ಸಮುದಾಯದ ಡಿಜಿಟಲ್ ಪ್ರತಿಭಟನೆ

ಮುಖ್ಯ ನ್ಯಾಯಮೂರ್ತಿಗಳು ಕೋರ್ಟ್ ವಿಚಾರಣೆಯೊಂದರಲ್ಲಿ ನಿರುದ್ಯೋಗಿ ಯುವಕರನ್ನು ‘ಜಿರಳೆಗಳು’ ಎಂದು ಹೋಲಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಯುವ ಜನಾಂಗ ಆಕ್ರೋಶಗೊಂಡಿತ್ತು. ಇದನ್ನೇ ಅಸ್ತ್ರವಾಗಿಸಿಕೊಂಡು ಅಭಿಜೀತ್ ದೀಪ್ಕೆ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಆರಂಭಿಸಿದ ಈ ವಿಡಂಬನಾತ್ಮಕ ಪೇಜ್, ಇಂದು ದೇಶದ ಅತಿ ದೊಡ್ಡ ಡಿಜಿಟಲ್ ಮೂವ್‌ಮೆಂಟ್ ಆಗಿ ಮಾರ್ಪಟ್ಟಿದೆ. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವ್ಯವಸ್ಥೆಯ ವಿರುದ್ಧದ ಅಸಮಾಧಾನವನ್ನು ಯುವಕರು ಈ ಪೇಜ್ ಮೂಲಕ ಹಾಸ್ಯ ಹಾಗೂ ವಿಡಂಬನೆಯ ರೂಪದಲ್ಲಿ ಹೊರಹಾಕುತ್ತಿದ್ದಾರೆ.

ಬಿಜೆಪಿಗಿಂತಲೂ ಮುಂದಿರುವ ಸಿಜೆಪಿ ಫಾಲೋವರ್ಸ್

ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಒಟ್ಟು 8.7 ಮಿಲಿಯನ್ (87 ಲಕ್ಷ) ಫಾಲೋವರ್ಸ್ ಹೊಂದಿದ್ದರೆ, ಕೇವಲ 50 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಹಾಕಿರುವ ಕಾಕ್ರೋಚ್ ಜನತಾ ಪಾರ್ಟಿ ಬರೋಬ್ಬರಿ 10.2 ಮಿಲಿಯನ್ (1 ಕೋಟಿಗೂ ಅಧಿಕ) ಫಾಲೋವರ್ಸ್ ದಾಟಿಸಿ ಮುನ್ನುಗ್ಗುತ್ತಿದೆ.

“ಯುವಶಕ್ತಿಯನ್ನು ಎಂದಿಗೂ ಕೀಳಾಗಿ ಅಂದಾಜಿಸಬೇಡಿ” ಎಂಬ ಘೋಷಣೆಯೊಂದಿಗೆ ಇಂಟರ್ನೆಟ್ ಆಳುತ್ತಿರುವ ಈ ಡಿಜಿಟಲ್ ಪಾರ್ಟಿ, ಭಾರತೀಯ ಯುವಕರ ಸಾಮಾಜಿಕ ಜಾಲತಾಣದ ಶಕ್ತಿಯನ್ನು ಇಡೀ ದೇಶಕ್ಕೆ ಸಾಬೀತುಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !