May 27, 2026
Wednesday, May 27, 2026
spot_img

ಮನೆ ಬಾಗಿಲು ಮುರಿದು ಚಿನ್ನ ಕಳ್ಳತನ: ಮಾರಿಹಾಳ ಪೊಲೀಸರ ಬಲೆಗೆ ಬಿದ್ದ ಆರೋಪಿ

ಹೊಸದಿಗಂತ ವರದಿ ಬೆಳಗಾವಿ:

ಮನೆಯ ಬಾಗಿಲು ಮುರಿದು 42 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಶಿಂದೋಳ್ಳಿ ಗ್ರಾಮದ ಮಹಾಲಕ್ಷ್ಮೀಪುರಂ ನಗರದಲ್ಲಿರುವ ನಡೆದಿದ್ದು, ಕಳ್ಳತನ ಮಾಡಿರುವ ಆರೋಪಿಯನ್ನು ಮಾರಿಹಾಳ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಾರಿಹಾಳ ಪೊಲೀಸ ಠಾಣೆ ಅಪರಾಧ ಸಂಖ್ಯೆ: 59/2026 ಕಲಂ: 305, 331(3) ಬಿಎನ್ಎಸ್-2023 ನೇ ಪ್ರಕರಣದಲ್ಲಿ ದಾಖಲಾಗಿ ತನಿಖೆ ನಡೆಸಲಾಗಿತ್ತು.

ಇದನ್ನೂ ಓದಿ:

ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಕಳುವಾದ ವಸ್ತುಗಳು ಹಾಗೂ ಆರೋಪಿತರ ಪತ್ತೆ ಕುರಿತು ಈ ಪ್ರಕರಣದ ಪತ್ತೆಗಾಗಿ ಒಂದು ತಂಡವನ್ನು ರಚಿಸಿ ತನಿಖೆಯನ್ನು ಆರಂಭಿಸಿ ಮಾರಿಹಾಳ ಪೊಲೀಸರು ಆರೋಪಿ ವಿಶ್ವನಾಥ ದುರ್ಗಪ್ಪ ಮುತ್ತೂರ (26) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ವಿರುದ್ಧ ಮಾರಿಹಾಳ ಪೊಲೀಸ ಠಾಣೆಯ 3 ಪ್ರಕರಣಗಳು ಹಾಗೂ 1 ಕಾಕತಿ ಪೊಲೀಸ ಠಾಣೆ ಮನೆ ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿದ್ದು ತನಿಖೆಯಲ್ಲಿ ಬಯಲಾಗಿದೆ. ಆರೋಪಿಯಿಂದ ಸುಮಾರು 23,00,000 ರೂ ಬೆಲೆಯ 134 ಗ್ರಾಂ ಬಂಗಾರದ ಆಭರಣಗಳು ಮತ್ತು 510 ಗ್ರಾಂ ಬೆಳ್ಳಿಯ ಆಭರಣಗಳನ್ನು ಜಪ್ತ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !