June 18, 2026
Thursday, June 18, 2026
spot_img

ಟೋಲ್ ಬಳಿ ಮನೆ ಇದ್ದವರಿಗೆ ಸಿಹಿ ಸುದ್ದಿ: 20 ಕಿ.ಮೀ ವ್ಯಾಪ್ತಿಯ ನಿವಾಸಿಗಳಿಗೆ ಸ್ಪೆಷಲ್ ಪಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸ್ಥಳೀಯ ನಿವಾಸಿಗಳ ಅನುಕೂಲಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ಡಿಜಿಟಲ್ ಮಾಸಿಕ ಹಾಗೂ ವಾರ್ಷಿಕ ಟೋಲ್ ಪಾಸ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಈ ಸೌಲಭ್ಯ ಲಭ್ಯವಾಗುವ ಸಾಧ್ಯತೆ ಇದೆ.

ಫಾಸ್ಟ್ಯಾಗ್ ಜೊತೆಗೆ ನೇರ ಸಂಪರ್ಕ

ಹೊಸ ವ್ಯವಸ್ಥೆಯಡಿ ಪಾಸ್‌ಗಳನ್ನು ವಾಹನಗಳ ಫಾಸ್ಟ್ಯಾಗ್ ಖಾತೆಗಳಿಗೆ ಲಿಂಕ್ ಮಾಡಲಾಗುತ್ತದೆ. ವಿಳಾಸ ಮತ್ತು ಗುರುತಿನ ದಾಖಲೆಗಳ ಪರಿಶೀಲನೆಯ ಬಳಿಕ ಪಾಸ್ ಸಕ್ರಿಯಗೊಳ್ಳಲಿದ್ದು, ಪದೇಪದೇ ಟೋಲ್ ಪಾವತಿ ಮಾಡುವ ಅಗತ್ಯ ತಪ್ಪಲಿದೆ. ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ಸಮಯ ಹಾಗೂ ಹಣದ ಉಳಿತಾಯವಾಗಲಿದೆ.

ಇದನ್ನೂ ಓದಿ:

ಬ್ಯಾರಿಯರ್ ರಹಿತ ಟೋಲ್ ವ್ಯವಸ್ಥೆಗೆ ಬೆಂಬಲ

ದೇಶಾದ್ಯಂತ ‘ಮಲ್ಟಿ ಲೇನ್ ಫ್ರೀ ಫ್ಲೋ’ ತಂತ್ರಜ್ಞಾನವನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ಯೋಜನೆ ರೂಪಿಸಲಾಗಿದೆ. ಭೌತಿಕ ಪಾಸ್, ಕೈಯಾರೆ ಪರಿಶೀಲನೆ ಮತ್ತು ಸಿಬ್ಬಂದಿ ಅವಲಂಬನೆ ಕಡಿಮೆಯಾಗಲಿದ್ದು, ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಮೂಲಕ ಟೋಲ್ ಸಂಗ್ರಹ ಪ್ರಕ್ರಿಯೆ ಸುಗಮಗೊಳ್ಳಲಿದೆ.

ಪ್ರಸ್ತುತ ನಿಯಮಗಳಲ್ಲಿ ಬದಲಾವಣೆ ಸಾಧ್ಯತೆ

ಈಗಾಗಲೇ ಸ್ಥಳೀಯ ಖಾಸಗಿ ವಾಹನಗಳಿಗೆ ಮಾಸಿಕ ಪಾಸ್ ವ್ಯವಸ್ಥೆ ಇದ್ದರೂ, ಅದಕ್ಕಾಗಿ ಟೋಲ್ ಪ್ಲಾಜಾಗಳಿಗೆ ತೆರಳಿ ದಾಖಲೆ ಸಲ್ಲಿಸಬೇಕಾಗುತ್ತದೆ. ಹೊಸ ಡಿಜಿಟಲ್ ವ್ಯವಸ್ಥೆ ಜಾರಿಗೆ ಬಂದರೆ ಈ ಪ್ರಕ್ರಿಯೆ ಇನ್ನಷ್ಟು ಸರಳವಾಗಲಿದೆ. ಪಾಸ್ ದರದ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !