October 11, 2026
Sunday, October 11, 2026
spot_img

ಗುರುಗ್ರಾಮ್ ಬೈಕ್ ಚೇಸ್ ಕೇಸ್: ‘ಬೇಕು ಅಂತ ಡಿಕ್ಕಿ ಹೊಡೆದಿಲ್ಲ’ ಎಂದ ಕಲ್ಯಾಣ್ ಬೈನ್ಸ್ಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಬೈಕರ್‌ ಒಬ್ಬರಿಗೆ ಕಾರಿನಿಂದ ಹಿಂಬಾಲಿಸಿ ಡಿಕ್ಕಿ ಹೊಡೆದ ಆರೋಪಕ್ಕೆ ಸಂಬಂಧಿಸಿದಂತೆ ಕಲ್ಯಾಣ್ ಬೈನ್ಸ್ಲಾತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದು. ‘ನಾನು ಬೇಕು ಅಂತ ಡಿಕ್ಕಿ ಹೊಡೆದದ್ದಲ್ಲ’ ಎಂದು ಹೇಳಿದ್ದಾರೆ.

ಅವರೇ ಓವರ್‌ಟೇಕ್ ಮಾಡಿ ಮುಂದೆ ಹೋಗುತ್ತಿದ್ರು

ಭಾನುವಾರ ಬೆಳಗ್ಗೆ ತಮ್ಮ ಸೋದರ ಸಂಬಂಧಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಇಬ್ಬರು ಬೈಕರ್‌ಗಳು ಪದೇಪದೇ ಕಾರನ್ನು ಓವರ್‌ಟೇಕ್ ಮಾಡಿ ಮುಂದೆ ಹೋಗಿ, ಬಳಿಕ ಸ್ಲೋ ಮಾಡುತ್ತಿದ್ರು. ನಾನು ಉದ್ದೇಶಪೂರ್ವಕವಾಗಿ ಯಾರಿಗೂ ಡಿಕ್ಕಿ ಹೊಡೆದಿಲ್ಲ ಎಂದು ಹೇಳಿದ್ದಾರೆ.

ಬೈಕ್ ಕ್ಯಾಮೆರಾಗಳಲ್ಲಿ ಸೆರೆ

ಈ ಘಟನೆಗೆ ಸಂಬಂಧಿಸಿದ ಬೈಕ್ ಕ್ಯಾಮೆರಾಗಳಲ್ಲಿ ದೃಶ್ಯಗಳು ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಬಳಿಕ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.

ಇದನ್ನೂ ಓದಿ:

ಮಹಿಳೆ ಗಾಯಗೊಂಡಿದ್ದಕ್ಕೆ ವಿಷಾದ

ಡಿಕ್ಕಿಯ ಸಮಯದಲ್ಲಿ ಬೈಕ್‌ನಲ್ಲಿ ಮಹಿಳೆ ಇದ್ದಾಳೆ ಎಂಬುದು ತನಗೆ ತಿಳಿದಿರಲಿಲ್ಲ ಎಂದು ಬೈನ್ಸ್ಲಾ ಹೇಳಿದ್ದಾರೆ. ಘಟನೆಗೆ ವಿಷಾದವಿದ್ದು, ಮಹಿಳೆ ಗಾಯಗೊಂಡಿರುವುದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ.

ಮಹಿಳಾ ಬೈಕರ್ ಹೇಳಿದ್ದೇನು?

ಗಾಯಗೊಂಡ ಮಹಿಳಾ ಬೈಕರ್ ನೀಡಿರುವ ಹೇಳಿಕೆ ಪ್ರಕಾರ ‘ಕಾರು ತಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಿತ್ತು. ಡ್ರೈವರ್ ಬೇಕು ಅಂತಾನೆ ಅಡ್ಡಾದಿಡ್ಡಿ ಗಾಡಿ ಡ್ರೈವ್ ಮಾಡಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

Must Read