September 15, 2026
Tuesday, September 15, 2026
spot_img

ಮದೀನಾದ ನೆಲದಾಳದಲ್ಲಿ ಬೃಹತ್ ಖನಿಜ ಸಂಪತ್ತು: ಸೌದಿಯ ಪರಮಾಣು ಕನಸಿಗೆ ಸಿಕ್ಕಿತೇ ಹೊಸ ಇಂಧನ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೈಲ ಸಂಪನ್ಮೂಲಗಳಾಚೆಗೆ ತನ್ನ ಆರ್ಥಿಕತೆ ಹಾಗೂ ಇಂಧನ ವ್ಯವಸ್ಥೆಯನ್ನು ವಿಸ್ತರಿಸಲು ಮುಂದಾಗಿರುವ ಸೌದಿ ಅರೇಬಿಯಾಗೆ ಬಹುದೊಡ್ಡ ಖನಿಜ ಸಂಪತ್ತಿನ ಸುಳಿವು ಸಿಕ್ಕಿದೆ.

ಮದೀನಾ ಪ್ರದೇಶದ ಜಬಲ್ ಸಯಿದ್‌ನಲ್ಲಿ ನಡೆಸಿದ ಅನ್ವೇಷಣೆ ಮತ್ತು ಭೂವೈಜ್ಞಾನಿಕ ಅಧ್ಯಯನಗಳ ವೇಳೆ ಸುಮಾರು 110 ಮಿಲಿಯನ್ ಟನ್ ಅದಿರು ಸಂಪನ್ಮೂಲಗಳು ಪತ್ತೆಯಾಗಿವೆ ಎಂದು ಸೌದಿ ಇಂಧನ ಸಚಿವ ಪ್ರಿನ್ಸ್ ಅಬ್ದುಲಜೀಜ್ ಬಿನ್ ಸಲ್ಮಾನ್ ತಿಳಿಸಿದ್ದಾರೆ.

ವಿಯೆನ್ನಾದಲ್ಲಿ ನಡೆದ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಸಾಮಾನ್ಯ ಸಮ್ಮೇಳನದಲ್ಲಿ ಮಾತನಾಡಿದ ಪ್ರಿನ್ಸ್ ಅಬ್ದುಲಜೀಜ್ , ಜಬಲ್ ಸಯಿದ್ ಪ್ರದೇಶದ ಅಧ್ಯಯನಗಳಲ್ಲಿ ವಿಶೇಷವಾಗಿ ಭಾರೀ ಅಪರೂಪದ ಭೂ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿರುವುದು ಕಂಡುಬಂದಿದೆ. ಆದರೆ ಇದರಲ್ಲಿ ಯುರೇನಿಯಂ ಪ್ರಮಾಣ ಎಷ್ಟಿದೆ ಎನ್ನೋದನ್ನು ಬಹಿರಂಗ ಪಡಿಸಿಲ್ಲ.

ಇದನ್ನೂ ಓದಿ:

ಪರಮಾಣು ಯೋಜನೆಗೆ ಸೌದಿಯ ವೇಗ

‘ವಿಷನ್ 2030’ ಯೋಜನೆಯಡಿ ತೈಲ ಅವಲಂಬನೆಯನ್ನು ಕಡಿಮೆ ಮಾಡಲು ಸೌದಿ ಅರೇಬಿಯಾ ಖನಿಜ ಹಾಗೂ ಪರ್ಯಾಯ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆಗೆ ಒತ್ತು ನೀಡುತ್ತಿದೆ. ದೇಶೀಯವಾಗಿ ಯುರೇನಿಯಂ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ನಾಗರಿಕ ಪರಮಾಣು ವಿದ್ಯುತ್ ಕಾರ್ಯಕ್ರಮವನ್ನು ಮುಂದುವರಿಸುವುದು ಇದೇ ಕಾರ್ಯತಂತ್ರದ ಭಾಗವಾಗಿದೆ.

ಒಟ್ಟಿನಲ್ಲಿ ತೈಲದ ಮೇಲೆ ಅವಲಂಬಿತವಾಗಿದ್ದ ಸೌದಿ ಅರೇಬಿಯಾ ಇದೀಗ ಯುರೇನಿಯಂ, ಅಪರೂಪದ ಭೂಖನಿಜಗಳು ಮತ್ತು ಪರಮಾಣು ಶಕ್ತಿಯತ್ತ ಗಮನ ಹರಿಸುತ್ತಿದೆ.ಈ ಪತ್ತೆ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿದ್ದರೆ, ಸೌದಿಯ ಇಂಧನ ಭದ್ರತೆಗೆ ಪ್ರಮುಖ ತಿರುವಾಗಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !