June 2, 2026
Tuesday, June 2, 2026
spot_img

ಟ್ರಂಪ್ ಎಂಟ್ರಿಗೆ ತಣ್ಣಗಾಯ್ತಾ ಯುದ್ಧದ ಕಾವು? ಶಾಂತಿಯತ್ತ ಇಸ್ರೇಲ್-ಹಿಜ್ಬುಲ್ಲಾ ಹೆಜ್ಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ನೀಡುವ ಕುರಿತು ಮಹತ್ವದ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ ಬಳಿಕ ಉಭಯಪಕ್ಷಗಳು ದಾಳಿಗಳನ್ನು ಸ್ಥಗಿತಗೊಳಿಸುವ ಬಗ್ಗೆ ಸಕಾರಾತ್ಮಕ ಚರ್ಚೆ ನಡೆಸಿವೆ ಎಂಬ ಮಾಹಿತಿ ಹೊರಬಿದ್ದಿದೆ.

ದಾಳಿ ನಿಲ್ಲಿಸುವ ಕುರಿತು ಒಪ್ಪಂದದ ಚರ್ಚೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನಡೆದ ಮಾತುಕತೆ ಹಾಗೂ ಮಧ್ಯವರ್ತಿಗಳ ಮೂಲಕ ನಡೆದ ಸಂಪರ್ಕದ ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನಗಳು ವೇಗ ಪಡೆದಿವೆ. ಇಸ್ರೇಲ್ ತನ್ನ ಮುಂದಿನ ಸೈನಿಕ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಸಿದ್ಧತೆ ತೋರಿದರೆ, ಹಿಜ್ಬುಲ್ಲಾ ಕೂಡ ದಾಳಿಗಳನ್ನು ಕಡಿಮೆ ಮಾಡುವ ಕುರಿತು ಚರ್ಚೆಗೆ ಒಲವು ತೋರಿದೆ ಎನ್ನಲಾಗಿದೆ.

ಇದನ್ನೂ ಓದಿ:

ಮತ್ತೆ ಕ್ಷಿಪಣಿ ಎಚ್ಚರಿಕೆ

ಆದರೆ ಶಾಂತಿ ಪ್ರಯತ್ನಗಳ ನಡುವೆಯೇ ಉತ್ತರ ಇಸ್ರೇಲ್ ಭಾಗದಲ್ಲಿ ಕ್ಷಿಪಣಿ ದಾಳಿ ಎಚ್ಚರಿಕೆಗಳು ಕೇಳಿಬಂದಿರುವುದು ಪರಿಸ್ಥಿತಿ ಇನ್ನೂ ಸಂಪೂರ್ಣ ಶಾಂತವಾಗಿಲ್ಲ ಎಂಬುದನ್ನು ಸೂಚಿಸಿದೆ. ಗಡಿ ಭಾಗದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.

ವಾಷಿಂಗ್ಟನ್‌ನಲ್ಲಿ ಮಹತ್ವದ ಮಾತುಕತೆ

ಮುಂದಿನ ಹಂತವಾಗಿ ಇಸ್ರೇಲ್ ಮತ್ತು ಲೆಬನಾನ್ ಪ್ರತಿನಿಧಿಗಳ ನಡುವೆ ಅಮೆರಿಕದಲ್ಲಿ ಮಹತ್ವದ ಮಾತುಕತೆ ನಡೆಯುವ ಸಾಧ್ಯತೆ ಇದೆ. ದೀರ್ಘಕಾಲಿಕ ಕದನ ವಿರಾಮ ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆ ಕುರಿತು ಚರ್ಚೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !