ಇಂದಿನ ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್ ಯುಗದಲ್ಲಿ, ಅದರಲ್ಲೂ ವಿಶೇಷವಾಗಿ ಐಟಿ ನೌಕರರಲ್ಲಿ ಬೆನ್ನುನೋವು ಮತ್ತು ಕುತ್ತಿಗೆ ನೋವು ಸರ್ವೇಸಾಮಾನ್ಯವಾಗಿಬಿಟ್ಟಿದೆ. ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ಸತತವಾಗಿ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಬೆನ್ನುಮೂಳೆಯ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಇದು ದೀರ್ಘಕಾಲದ ದೈಹಿಕ ಸಮಸ್ಯೆಗೆ ಕಾರಣವಾಗಬಹುದು.
ನೀವು ಆಫೀಸ್‌ನಲ್ಲಿ ಕೆಲಸ ಮಾಡುವಾಗ ಅಥವಾ ಮನೆಯಿಂದಲೇ ಕೆಲಸ ಮಾಡುವಾಗ ನಿಮ್ಮ ಸೀಟಿನಲ್ಲೇ ಕುಳಿತು ಮಾಡಬಹುದಾದ ಕೆಲವು ಸರಳ ಸ್ಟ್ರೆಚಿಂಗ್‌ಗಳು ಇಲ್ಲಿದೆ:
ಚೇರ್ ಟ್ವಿಸ್ಟ್:
ಕುರ್ಚಿಯಲ್ಲೇ ನೇರವಾಗಿ ಕುಳಿತುಕೊಕೊಂಡು. ನಿಮ್ಮ ಎಡಗೈಯನ್ನು ಬಲ ಮೊಣಕಾಲಿನ ಮೇಲಿಟ್ಟು, ದೇಹವನ್ನು ಬಲಗಡೆಗೆ ತಿರುಗಿಸಿ ಕುರ್ಚಿಯ ಹಿಂಭಾಗವನ್ನು ಹಿಡಿಯಬೇಕು. ಇದೇ ರೀತಿ ಮತ್ತೊಂದು ಕಡೆ ಮಾಡಬೇಕು. ಇದು ಬೆನ್ನಿನ ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡುತ್ತದೆ.
ನೆಕ್ ಅಂಡ್ ಶೋಲ್ಡರ್ ರೋಲ್
ನಿಮ್ಮ ಕುತ್ತಿಗೆಯನ್ನು ನಿಧಾನವಾಗಿ ಪ್ರದಕ್ಷಿಣೆ ಮತ್ತು ಅಪ್ರದಕ್ಷಿಣೆಯಾಗಿ ತಿರುಗಿಸಿ. ನಂತರ ಹೆಗಲನ್ನು ಮುಂಭಾಗ ಹಾಗೂ ಹಿಂಭಾಗಕ್ಕೆ ರೌಂಡ್ ಆಗಿ ತಿರುಗಿಸಬEಕು. ಇದು ಕುತ್ತಿಗೆ ನೋವನ್ನು ತಕ್ಷಣ ನಿವಾರಿಸುತ್ತದೆ.
ಇದನ್ನೂ ಓದಿ:
ಸೀಟೆಡ್ ಫಾರ್ವರ್ಡ್ ಬೆಂಡ್
ಕುರ್ಚಿಯ ಮೇಲೆ ಕುಳಿತು ಎರಡೂ ಕಾಲುಗಳನ್ನು ಸ್ವಲ್ಪ ಅಗಲವಾಗಿ ಇಟ್ಟು. ಈಗ ನಿಧಾನವಾಗಿ ಮುಂಭಾಗಕ್ಕೆ ಬಾಗಿ ನಿಮ್ಮ ಕೈಗಳಿಂದ ಪಾದಗಳನ್ನು ಮುಟ್ಟಲು ಪ್ರಯತ್ನಿಸಿ. ತಲೆಯನ್ನು ಕೆಳಗೆ ಬಿಡಿ. ಇದು ಕೆಳಬೆನ್ನಿನ ಒತ್ತಡವನ್ನು ಕಡಿಮೆ ಮಾಡುತ್ತದೆ.



