April 15, 2026
Wednesday, April 15, 2026
spot_img

ಗ್ಯಾಸ್ ಇಲ್ಲದೆ ಸಾಂಬಾರ್ ಮಾಡೋಕೆ ಹೊಸ ‘ಐಡಿಯಾ’ ಇಲ್ಲಿದೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದ ಯುದ್ಧ ಪರಿಣಾಮದಿಂದ ದೇಶದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿ ಜನರು ಸಂಕಷ್ಟ ಅನುಭವಿಸುತ್ತಿರುವ ನಡುವೆ, ಯುವಕನೊಬ್ಬ ಕಂಡುಕೊಂಡ ಹೊಸ ವಿಧಾನ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಡುಗೆ ಗ್ಯಾಸ್ ಸಿಗದೇ ಪರದಾಡುತ್ತಿರುವ ಜನರಿಗೆ ಈ ಪ್ರಯೋಗ ಹೊಸ ಚರ್ಚೆಗೆ ಕಾರಣವಾಗಿದೆ.

ನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಅನೇಕ ಮನೆಗಳು ಮತ್ತು ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವರು ಇಂಡಕ್ಷನ್ ಸ್ಟೌ ಅಥವಾ ಎಲೆಕ್ಟ್ರಿಕ್ ಸಾಧನಗಳತ್ತ ಮುಖ ಮಾಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಟೆಕ್ಕಿ ಯುವಕನೊಬ್ಬ ಗ್ಯಾಸ್ ಇಲ್ಲದೇ ಅಡುಗೆ ಮಾಡುವ ಪ್ರಯೋಗ ಮಾಡಿ ಗಮನ ಸೆಳೆದಿದ್ದಾನೆ.

ಸ್ಟೀಲ್ ಪಾತ್ರೆಯಲ್ಲಿ ಸಾಂಬಾರ್ ಪದಾರ್ಥಗಳನ್ನು ಹಾಕಿ, ಅದನ್ನು ಕುದಿಸಲು ವಾಟರ್ ಹೀಟರ್ (ಇಮ್ಮರ್ಷನ್ ರಾಡ್) ಬಳಸಿದ್ದಾನೆ. ನೀರನ್ನು ಬಿಸಿಮಾಡುವ ಸಾಧನವೇ ಅಡುಗೆಗೆ ಉಪಯೋಗಿಸಿರುವುದು ಹಲವರಲ್ಲಿ ಆಶ್ಚರ್ಯ ಮೂಡಿಸಿದೆ.

ಇದನ್ನೂ ಓದಿ:

ಈ ವಿಡಿಯೋವನ್ನು ಹಿಮಾಂಕ್ ವಸುದೇವ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಗ್ಯಾಸ್ ಗಾನ್, ಹೀಟ್ ರಾಡ್ ಆನ್” ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಕ್ರಿಯೇಟಿವಿಟಿಯನ್ನು ಮೆಚ್ಚಿದರೆ, ಇನ್ನೂ ಕೆಲವರು ಇದು ಅಪಾಯಕಾರಿ ಪ್ರಯೋಗ ಎಂದು ಎಚ್ಚರಿಕೆ ನೀಡಿದ್ದಾರೆ.

ತಜ್ಞರ ಪ್ರಕಾರ, ಇಮ್ಮರ್ಷನ್ ರಾಡ್‌ಗಳನ್ನು ನೇರವಾಗಿ ಆಹಾರ ತಯಾರಿಕೆಗೆ ಬಳಸುವುದು ಸುರಕ್ಷಿತವಲ್ಲ. ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !