October 11, 2026
Sunday, October 11, 2026
spot_img

ಯುಪಿಐ ಟ್ರಾನ್ಸಾಕ್ಷನ್‌ಗೂ ಟ್ಯಾಕ್ಸ್‌ ಅಂದ್ರೆ ಹೇಗೆ? ಜನ ಇದನ್ನು ಒಪ್ಪಬಾರದು ಎಂದ ಸುರ್ಜೇವಾಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯುಪಿಐ ಟ್ರಾನ್ಸಾಕ್ಷನ್‌ಗೂ ಟ್ಯಾಕ್ಸ್‌ ಅಂದ್ರೆ ಹೇಗೆ? ಇದು ಜನರಿಗೆ ಮಾಡಿರುವ ಮೋಸ ಅಲ್ವಾ? ಇದನ್ನು ಕಾಂಗ್ರೆಸ್‌ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಉಸ್ತುವಾರಿ ರಣದೀಪ್​​ ಸಿಂಗ್​​ ಸುರ್ಜೇವಾಲ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, ಹಣ ಖರ್ಚು ಮಾಡೋಕೂ ಟ್ಯಾಕ್ಸ್‌ ಹಾಕ್ತಿದ್ದಾರೆ. ಎರಡು ಸಾವಿರ ರೂಪಾಯಿ ಮೇಲೆ ಯುಪಿಐ ಪೇಮೆಂಟ್ಸ್‌ ಮಾಡಿದ್ರೆ ಟ್ಯಾಕ್ಸ್‌ ಹಾಕ್ತಿದ್ದಾರೆ. ಬಿಜೆಪಿ ಸರ್ಕಾರ ಅಮೆರಿಕದ ಕಂಪನಿಗಳಿಗೆ ಸರೆಂಡರ್‌ ಆಗಿದೆ. ಈ ರೀತಿ ಮಾಡೋದ್ರಿಂದ ಮಧ್ಯಮ ವರ್ಗದ ಜನರ ಮೇಲೆ ಆಗುವ ಪರಿಣಾಮದ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ 0.4% ಶುಲ್ಕ ವಿಧಿಸುವುದರಿಂದ ಟ್ರಾನ್ಸಾಕ್ಷನ್ ಟ್ಯಾಕ್ಸ್ ಮುಂದೆ ಎಲ್ಲರಿಗೂ ವಿಸ್ತರಣೆ ಮಾಡುವ ಆತಂಕ ಎದುರಾಗಿದೆ. ಮೋದಿ ಸರ್ಕಾರ ಯುಪಿಐ ಅನ್ನು ಕಲೆಕ್ಷನ್ ಮಷಿನ್ ಆಗಿ ಮಾಡ್ತಿದೆ. ಜನರ ಇದನ್ನು ವಿರೋಧಿಸಬೇಕು, ಸರ್ಕಾರ ನಿಮ್ಮನ್ನು ದಿವಾಳಿ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

Must Read