ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಿಂಗ್ ಆಫ್ ಕೊತ’ ಸಿನಿಮಾ ಸೋತು ತಲೆಬಿಸಿಯಲ್ಲಿದ್ದ ದುಲ್ಕರ್ ಸಲ್ಮಾನ್ ಅವರ ಅಭಿಮಾನಿಗಳಿಗೆ ಈ ವರ್ಷ ‘I’m Game’ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. “ಸಾಕಪ್ಪಾ ಸಾಕಾಯ್ತು, ನಮ್ಮ ಹೀರೋ ಮತ್ತೆ ಮಲಯಾಳಂಗೆ ಗ್ರಾಂಡ್ ಆಗಿ ಕಮ್‌ಬ್ಯಾಕ್ ಮಾಡ್ತಾರೆ, ಥಿಯೇಟರ್‌ಗಳನ್ನೆಲ್ಲ ಶೇಕ್ ಮಾಡ್ತಾರೆ” ಎಂದು ಪ್ರತಿಯೊಬ್ಬ ಫ್ಯಾನ್ ಕೂಡ ಕಾಯ್ತಿದ್ದ. ಆದರೆ ಈಗ ಥಿಯೇಟರ್‌ಗಳಿಂದ ಬರ್ತಿರೋ ರಿಪೋರ್ಟ್ ನೋಡಿದ್ರೆ, ಸೀನ್ ಅಂದುಕೊಂಡಷ್ಟು ಸರಿ ಇಲ್ಲ ಅನಿಸ್ತಿದೆ.
ಸಿನಿಮಾ ರಿಲೀಸ್ ಆದ ಮೊದಲ ದಿನವೇ ಒಂಥರಾ ಹಬ್ಬದ ವಾತಾವರಣ ಇತ್ತು. ಓಪನಿಂಗ್ ದಿನವೇ ‘Sacnilk’ ರಿಪೋರ್ಟ್ ಪ್ರಕಾರ ‘I’m Game’ ಬರೋಬ್ಬರಿ 5.40 ಕೋಟಿ ಕಲೆಕ್ಷನ್ ಮಾಡಿ, ದುಲ್ಕರ್ ಕೆರಿಯರ್‌ನಲ್ಲೇ ಟಾಪ್ 5 ಓಪನಿಂಗ್ ಪಟ್ಟಿಗೆ ಸೇರ್ಪಡೆಯಾಯ್ತು. ವೀಕೆಂಡ್‌ನಲ್ಲಿ ಫ್ಯಾನ್ಸ್ ಎಲ್ಲಾ ಮುಗಿಬಿದ್ದು ಸಿನಿಮಾ ನೋಡಿದ್ದಕ್ಕೆ ಕಲೆಕ್ಷನ್ ಗಟ್ಟಿಯಾಗಿಯೇ ಇತ್ತು. “ಅಬ್ಬಾ, ದುಲ್ಕರ್ ಪಕ್ಕಾ ಹಿಟ್ ಕೊಟ್ರು” ಎಂದು ಎಲ್ಲರೂ ಅಂದುಕೊಳ್ಳುವಷ್ಟರಲ್ಲಿ ಕಥೆ ಉಲ್ಟಾ ಆಯ್ತು.
ವಾರದ ಮೊದಲ ದಿನ, ಅಂದ್ರೆ ಸೋಮವಾರ ಬರ್ತಿದ್ದಂತೆ ಸಿನಿಮಾದ ಕಲೆಕ್ಷನ್ ಥೇಟ್ ವಾಟರ್ ಸ್ಲೈಡ್‌ನಲ್ಲಿ ಜಾರಿದ ಹಾಗೆ ಪಕ್ಕಾ ಕೆಳಗೆ ಬಿತ್ತು. ಜನರಿಂದ ಮಿಕ್ಸ್‌ಡ್ ಟಾಕ್ ಬರಲು ಶುರುವಾಗಿದ್ದೇ ತಡ, ಸೋಮವಾರ ಬಂದಿದ್ದು ಬರೀ 1.50 ಕೋಟಿ ಮಾತ್ರ.
ಅಲ್ಲಿಂದ ಶುರುವಾದ ಡೌನ್ ಫಾಲ್, ಬುಧವಾರದ ವೇಳೆಗೆ ಇನ್ನೂ ಕೆಟ್ಟದಾಯ್ತು. 7ನೇ ದಿನ ಸಿನಿಮಾ ಗಳಿಸಿದ್ದು ಬರೀ 92 ಕೋಟಿ. ಅಂದ್ರೆ ಒಂದೇ ಒಂದು ಕೋಟಿ ರೂಪಾಯಿ ಗಡಿ ದಾಟೋಕೂ ಸಿನಿಮಾ ಪರದಾಡಿದೆ. ಸದ್ಯಕ್ಕೆ ಭಾರತದಲ್ಲಿ ಈ ಸಿನಿಮಾದ ಒಟ್ಟು ನೆಟ್ ಕಲೆಕ್ಷನ್ ಬಂದು 22.54 ಕೋಟಿ.
ಒಟ್ಟಿನಲ್ಲಿ ಹೇಳಬೇಕೆಂದರೆ, ಬರೀ ಹೀರೋ ಇಮೇಜ್ ಮತ್ತು ಸ್ಟಾರ್ ಪವರ್ ಇಟ್ಟುಕೊಂಡು ಸಿನಿಮಾನ ಹೆಚ್ಚು ದಿನ ಓಡಿಸೋಕೆ ಆಗಲ್ಲ ಅನ್ನೋದಕ್ಕೆ ‘I’m Game’ ಮತ್ತೊಂದು ಉದಾಹರಣೆ. ಜನರಿಗೆ ಕಂಟೆಂಟ್ ಇಷ್ಟವಾದರೆ ಮಾತ್ರ ಥಿಯೇಟರ್‌ಗೆ ಬರ್ತಾರೆ. ದುಲ್ಕರ್ ಕಮ್‌ಬ್ಯಾಕ್ ಮಾಡಿದ್ದು ನಿಜ, ಆದ್ರೆ ಗೇಮ್ ಗೆಲ್ಲೋಕೆ ಮಾತ್ರ ಇನ್ನು ಕಷ್ಟಪಡಬೇಕಾಗಿದೆ.



