July 31, 2026
Friday, July 31, 2026
spot_img

VIRAL | ಈ ಊರಲ್ಲಿ ಸೊಸೆಯರಿಗೆ ಮಾತ್ರ ರಿಸ್ಟ್ರಿಕ್ಷನ್‌! ಸ್ಮಾರ್ಟ್‌ ಫೋನ್‌ ಬಳಕೆ ಮಾಡುವಂತಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಯಲ್ಲಿ ಮಗಳಿಗೆ ಬೇಸಿಕ್‌ ಫೋನ್‌ ಕೊಡಿಸಿ, ಮಗನಿಗೆ ಮಾತ್ರ ಸ್ಮಾರ್ಟ್‌ ಫೋನ್‌ ಕೊಡಿಸಿದ್ರೆ ಜಗಳ ನಡೆಯೋದಿಲ್ವೇ? ಹೆಣ್ಣುಮಕ್ಕಳಿಗೆ ಮಾತ್ರ ನಿರ್ಬಂಧ ಇರೋದು ಈಗಿನಿಂದ ಬಂದದ್ದಲ್ಲ.

ರಾಜಸ್ಥಾನದ ಒಂದು ಗ್ರಾಮ ಪಂಚಾಯತ್‌ ವ್ಯಾಪ್ತಿಯ 15 ಹಳ್ಳಿಯಲ್ಲಿ ಸೊಸೆಯಂದಿರು ಹಾಗೂ ಹೆಣ್ಣುಮಕ್ಕಳಿಗೆ ಸ್ಮಾರ್ಟ್‌ ಫೋನ್‌ ಬಳಕೆಯನ್ನು ನಿಷೇಧಿಸಲಾಗಿದೆ. ವಿಚಿತ್ರ ಎನಿಸಿದ್ರೂ ಇದು ಸತ್ಯ. ಹೆಣ್ಣುಮಕ್ಕಳು ತಮ್ಮ ಕೈಯಲ್ಲಿ ಕೀಪ್ಯಾಡ್‌ ಫೋನ್‌ ಇಟ್ಟುಕೊಂಡು ಓಡಾಡೋದನ್ನು ಕಾಣಬಹುದು.

ರಾಜಸ್ಥಾನದ ಜಾಲೋರ್‌ ಜಿಲ್ಲೆಯ ಎಲ್ಲ ಗ್ರಾಮದಲ್ಲಿ ಜನವರಿಯಿಂದ ಈ ನಿಯಮ ಜಾರಿಗೆ ಬಂದಿದೆ. ಯುವತಿಯರು ಸ್ಮಾರ್ಟ್‌ ಫೋನ್‌ ಬಂದಮೇಲೆ ಸೋಂಬೇರಿ ಆಗಿದ್ದಾರೆ. ಮನೆ ಕೆಲಸ ಮಾಡುವುದನ್ನು ಬಿಟ್ಟ ರೀಲ್ಸ್‌ ಮಾಡಿಕೊಂಡು ಕೂರುತ್ತಾರೆ.

ಇನ್ನು ಶಾಲೆ, ಕಾಲೇಜುಗಳಿಗೆ ಹೋಗುವ ಹೆಣ್ಣುಮಕ್ಕಳು ಓದೋದನ್ನು ಬಿಟ್ಟು ರೀಲ್ಸ್‌, ಸೋಶಿಯಲ್‌ ಮೀಡಿಯಾದಲ್ಲಿ ಟೈಮ್‌ ಪಾಸ್‌ ಮಾಡುತ್ತಾರೆ. ಇದು ಉತ್ತಮ ಅಲ್ಲ, ಜತೆಗೆ ಕಣ್ಣಿನ ಮೇಲೂ ಕೆಟ್ಟ ಪರಿಣಾಮ ಉಂಟಾಗುತ್ತದೆ. ಈ ಕಾರಣದಿಂದ ಈ ರೀತಿ ನಿರ್ಧಾರ ಮಾಡಲಾಗಿದೆ.

ಇದಕ್ಕೆ ಸಾರ್ವಜನಿಕರು ವಿರೋಧಿಸಿದ್ದಾರೆ. ಗಂಡಸರಿಗಿಲ್ಲದ ರೂಲ್ಸ್‌ ಹೆಂಗಸರಿಗೆ ಮಾತ್ರ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನವ ಹಕ್ಕುಗಳ ಆಯೋಗವು ಜಾಲೋರ್ ಕಲೆಕ್ಟರ್‌ಗೆ ನೋಟಿಸ್ ನೀಡಿದೆ. ರಾಜಸ್ಥಾನ ಪಂಚಾಯತ್ ಮಹಿಳೆಯರಿಗೆ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವುದನ್ನು ಲಿಂಗ ತಾರತಮ್ಯ ಎಂದು ಕರೆದಿದೆ. ಜಾಲೋರ್‌ನಲ್ಲಿ 15 ಗ್ರಾಮಗಳ ಪಂಚಾಯತ್‌ಗಳು ಸೊಸೆಯಂದಿರು ಮತ್ತು ಹೆಣ್ಣುಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಕೆಯನ್ನು ನಿಷೇಧಿಸಿದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕಲೆಕ್ಟರ್ ಪ್ರದೀಪ್ ಗವಾಂಡೆ ಅವರಿಗೆ ನೋಟಿಸ್ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !