October 16, 2026
Friday, October 16, 2026
spot_img

ಆ ತಿಂಡಿ, ಈ ತಿಂಡಿ ಎಂದು ತಲೆ ಕೆಡಿಸಿಕೊಳ್ಳೋ ಬದಲು ನಿತ್ಯವೂ ಒಂದು ದೊಡ್ಡ ಲೋಟ ರಾಗಿ ಗಂಜಿ ಕುಡಿದುಬಿಡಿ!

ಇವತ್ತು ತಿಂಡಿಗೆ ಏನು ಮಾಡ್ಲಿ?
ಇವತ್ತು ಏನು ತಿಂಡಿ?
ನಂಗೆ ಗೊತ್ತಿಲ್ಲ, ಯಾರಾದ್ರೂ ಏನಾದ್ರು ತಿಂಡಿ ಮಾಡು ಅಂತ ಹೆಸರು ಹೇಳಿದ್ರೆ ಮಾಡ್ತೀನಿ ಅಷ್ಟೆ!
ಮಕ್ಕಳ ಬಾಕ್ಸ್‌ ರೆಡಿ ಇದೆ, ಆದರೆ ಈಗ ತಿನ್ನೋಕೆ ತಿಂಡಿ ಏನು?

ಅಡುಗೆ ಮನೆಯಲ್ಲಿ ಅಮ್ಮ ಹಾಗೂ ಉಳಿದ ಫ್ಯಾಮಿಲಿ ಮೆಂಬರ್ಸ್‌ ನಡುವಿನ ನಿತ್ಯದ ಮಾತುಕತೆ ಇದು…

ರಾತ್ರಿ ಮಲಗುವ ಮುನ್ನ ಚಿತ್ರಾನ್ನ ಮಾಡೋಣ ಎಂದುಕೊಂಡು ಮಲಗಿದವರಿಗೆ ಬೆಳಗ್ಗೆ ನಿಂಬೆಹಣ್ಣು ಖಾಲಿ ಎಂದು ಗೊತ್ತಾಗುತ್ತದೆ. ಹೋಗಿ ತರುವಷ್ಟು ಸಮಯ ಇಲ್ಲ, ಆರ್ಡರ್‌ ಮಾಡಿದರೆ ಕಾಯುವಷ್ಟು ವ್ಯವಧಾನವೂ ಇಲ್ಲ. ಹೀಗಿರುವಾಗ ಏನು ಮಾಡೋದು? ಚಿಂತೆ ಬಿಟ್ಟು ರಾಗಿ ಗಂಜಿ ಕುಡಿಯೋಕೆ ಶುರು ಮಾಡಿ. ಜಾಸ್ತಿ ದಿನ ಬೇಡ ಹತ್ತು ದಿನ ಇದನ್ನು ಬಿಡದಂತೆ ಮಾಡುತ್ತಾ ಹೋಗಿ. ಆಮೇಲೆ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ. ಬೆಳಗ್ಗೆ ಎಣ್ಣೆ ಅಥವಾ ಮಸಾಲೆ ಪದಾರ್ಥ ತಿಂದಿರುವ ಕಿರಿಕಿರಿ ಇಲ್ಲ. ಆರೋಗ್ಯ ಗಟ್ಟಿಯಾಗುತ್ತದೆ. ಮಕ್ಕಳಿಗೂ ಇದು ಬೆಸ್ಟ್‌. ಇದರ ಜೊತೆಗೆ ಮೊಟ್ಟೆ, ಕಾಳುಗಳು ಅಥವಾ ಇನ್ಯಾವುದೋ ಪ್ರೋಟೀನ್‌ ಸೋರ್ಸ್‌, ಹಣ್ಣುಗಳು ಅಥವಾ ಸೌತೆಕಾಯಿಯಂತಹ ತರಕಾರಿ ಕೂಡ ತಿನ್ನಬಹುದು.

ರಾಗಿ ಗಂಜಿ ಕುಡಿದರೆ ಏನಾಗತ್ತೆ?

ನೈಸರ್ಗಿಕವಾಗಿ ನಿಮ್ಮ ದೇಹ ಹಾಗೂ ತಲೆ ಕೂಲ್‌ ಆಗಿರುತ್ತದೆ. ಮಜ್ಜಿಗೆ ಅಥವಾ ಮೊಸರಿನ ಜೊತೆ ಸೇರಿಸಿ ಕುಡಿದರೆ ಬಾಡಿ ಹೀಟ್‌ ಸಮಸ್ಯೆ ನಿಮ್ಮಿಂದ ದೂರ ಇರುತ್ತದೆ.

ರಾಗಿಯಲ್ಲಿ ಹೈಯೆಸ್ಟ್‌ ಕ್ಯಾಲ್ಶಿಯಂ ಇದೆ. ಇದು ನಿಮ್ಮ ಬೋನ್‌ ಡೆನ್ಸಿಟಿಯನ್ನು ಉತ್ತಮಗೊಳಿಸುತ್ತದೆ.

ರಾತ್ರಿಯೇ ರಾಗಿ ಗಂಜಿ ತಯಾರಿಸಿ ಅದಕ್ಕೆ ಮೊಸರು ಅಥವಾ ಮಜ್ಜಿಗೆ ಹಾಕಿ ನೆನೆಸಿ ಇಟ್ಟು ಬೆಳಗ್ಗೆ ಕುಡಿದರೆ ಇದಕ್ಕಿಂತ ಬೆಸ್ಟ್‌ ಪ್ರೋಬಯಾಟಿಕ್‌ ಇನ್ನೊಂದಿಲ್ಲ. ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ.

ಇದರಲ್ಲಿ ಲೋ ಗ್ಲೈಸೆಮಿಕ್‌ ಇಂಡೆಕ್ಸ್‌ ಇರುವ ಕಾರಣ ಶುಗರ್‌ ಇರುವವರಿಗೂ ಉತ್ತಮ. ರಾಗಿಯಲ್ಲಿರುವ ಫೈಬರ್‌ ಶುಗರ್‌ ಸ್ಪೈಕ್‌ ಆಗೋದನ್ನು ತಪ್ಪಿಸುತ್ತದೆ.

ಇದರಲ್ಲಿ ಫೈಬರ್‌ ಇರುವ ಕಾರಣ ನಿಮಗೆ ಹೊಟ್ಟೆ ತುಂಬುತ್ತದೆ. ದೀರ್ಘ ಕಾಲದವರೆಗೂ ಹಸಿವಾಗೋದಿಲ್ಲ. ಹೀಗಾಗಿ ಅತಿಯಾಗಿ ತಿನ್ನುವ ಅಭ್ಯಾಸ ತಪ್ಪಿಹೋಗುತ್ತದೆ.

ಹೇಗೆ ಮಾಡೋದು?

ಬರೀ ರಾಗಿ ಹಿಟ್ಟಿನಿಂದ ಗಂಜಿ ತಯಾರು ಮಾಡಬಹುದು. ರಾಗಿಯ ಜೊತೆ ಬೇಳೆ, ಕಾಳುಗಳು, ಡ್ರೈ ಫ್ರೂಟ್ಸ್‌ ಪುಡಿ, ನವಣೆ, ಸಜ್ಜೆಯನ್ನು ಹಾಕಿ ಪುಡಿ ಮಾಡಿಸಿ ಇಟ್ಟುಕೊಂಡ್ರೆ ರುಚಿ ಚೆನ್ನಾಗಿರುತ್ತದೆ.
ಒಂದು ಲೋಟ ಗಂಜಿಗೆ : ಒಂದು ಲೋಟ ನೀರು, ಒಂದೂವರೆ ಸ್ಪೂನ್‌ ಹಿಟ್ಟು, ಚಿಟಿಕೆ ಉಪ್ಪು, ಜೀರಿಗೆ ಪುಡಿ
ಇದೆಲ್ಲವನ್ನೂ ಗಂಟಿಲ್ಲದಂತೆ ಕಲಸುತ್ತಾ ಸಣ್ಣ ಉರಿಯಲ್ಲಿ ಐದು ನಿಮಿಷ ಬೇಯಿಸಿದ್ರೆ ಗಂಜಿ ರೆಡಿ

Must Read