October 18, 2026
Sunday, October 18, 2026
spot_img

ಭಾರತದಲ್ಲೇ ತಯಾರಾಗಲಿವೆ ಐಫೋನ್ ಬಿಡಿಭಾಗಗಳು: PLI ಯೋಜನೆಗೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ತಂತ್ರಜ್ಞಾನ ಮತ್ತು ಮೊಬೈಲ್ ತಯಾರಿಕಾ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾರತವನ್ನು ಜಾಗತಿಕ ಮೊಬೈಲ್ ಹಬ್ ಮಾಡುವ ನಿಟ್ಟಿನಲ್ಲಿ ಸಚಿವ ಸಂಪುಟವು ಬರೋಬ್ಬರಿ ₹62,500 ಕೋಟಿ ಮೌಲ್ಯದ ಹೊಸ ಮೊಬೈಲ್ ಉತ್ಪಾದನಾ ಯೋಜನೆಗೆ ಒಪ್ಪಿಗೆ ಸೂಚಿಸಿದೆ.

ಮುಂದಿನ 5 ವರ್ಷಗಳ ರೋಡ್ ಮ್ಯಾಪ್ (PLI 2.0)

ಈ ಹಿಂದೆ ಜಾರಿಯಲ್ಲಿದ್ದ ಯಶಸ್ವಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯ ಮುಂದುವರಿದ ಭಾಗವಾಗಿ ಇದು ಜಾರಿಗೆ ಬರಲಿದೆ. ಮುಂದಿನ 5 ವರ್ಷಗಳ ಅವಧಿಗೆ ಅನುಷ್ಠಾನಗೊಳ್ಳಲಿರುವ ಈ ಯೋಜನೆಯು, ಭಾರತದಲ್ಲಿ ಸ್ಮಾರ್ಟ್‌ಫೋನ್ ಕ್ರಾಂತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಗುರಿ ಹೊಂದಿದೆ.

ಆ್ಯಪಲ್ ಯಶಸ್ಸಿನ ಬೆನ್ನಲ್ಲೇ ಹೊಸ ಹೆಜ್ಜೆ

ಹಿಂದಿನ ಪಿಎಲ್‌ಐ ಯೋಜನೆಯಿಂದಾಗಿ ಆ್ಯಪಲ್‌ನಂತಹ ಜಾಗತಿಕ ಕಂಪನಿಗಳು ಭಾರತದಲ್ಲೇ ಫೋನ್‌ಗಳನ್ನು ತಯಾರಿಸಲು ಆರಂಭಿಸಿದ್ದವು. ಪರಿಣಾಮವಾಗಿ, ಭಾರತದ ಮೊಬೈಲ್ ರಫ್ತು ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಸ್ಥಳೀಯ ಮೌಲ್ಯವರ್ಧನೆ ಶೇ. 24 ರಷ್ಟು ಪ್ರಗತಿ ಕಂಡಿದೆ.

ಬಿಡಿಭಾಗಗಳ ತಯಾರಿಕೆ ಮತ್ತು ಆರ್‌&ಡಿಗೆ ಆದ್ಯತೆ

ಹೊಸ ಯೋಜನೆಯಡಿ ಕೇವಲ ಮೊಬೈಲ್ ಜೋಡಣೆಯಷ್ಟೇ ಅಲ್ಲದೆ, ಸ್ಥಳೀಯವಾಗಿ ಬಿಡಿಭಾಗಗಳ ಖರೀದಿ, ದೇಶೀಯ ಬ್ರ್ಯಾಂಡ್‌ಗಳ ವಿನ್ಯಾಸ ಹಾಗೂ ಸಂಶೋಧನೆಗೆ (R&D) ವಿಶೇಷ ಒತ್ತು ನೀಡಲಾಗುವುದು ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದು ಭಾರತೀಯ ಬ್ರ್ಯಾಂಡ್‌ಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ.

Must Read