October 9, 2026
Friday, October 9, 2026
spot_img

IPL | ಬಿಸಿಸಿಐ ವಾರ್ನಿಂಗ್ ಗೆ ಡೋಂಟ್ ಕೇರ್: ಮತ್ತೆ ಡಗೌಟ್ ನಲ್ಲಿ ಫೋನ್ ಬಳಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಹಲವು ಸಂಗತಿಗಳು ಭಾರೀ ಸುದ್ದಿಯಾಗುತ್ತಿದ್ದು, ಆಟಗಾರರ ಮೇಲೆ ಫೈನ್ ಮೇಲೆ ಫೈನ್ ಗಳ ಬರೆ ಎಳೆಯಲಾಗುತ್ತಿದೆ. ಆದಾಗ್ಯೂ ಅನೇಕರು ಬಿಸಿಸಿಐಯ ಖಡಕ್ ನಿಮಯಗಳನ್ನು ಮತ್ತೆ ಮತ್ತೆ ಉಲ್ಲಂಘಿಸುತ್ತಿದ್ದಾರೆ.

ಈಗಾಗಲೇ ರಾಜಸ್ಥಾನ ರಾಯಲ್ಸ್ ಸ್ಟಾಫ್ ಫೋನ್ ಬಳಕೆ ಮಾಡಿ ಸಿಕ್ಕಿಬಿದ್ದು ದಂಡ ವಿಧಿಸಲಾಗಿದೆ. ಇದೀಗ ಮತ್ತೆ ಲಖನೌ ತಂಡದ ಸ್ಟಾಫ್ ಫೋನ್ ಬಳಕೆ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚೆನ್ನೈ ವಿರುದ್ಧದ ಪಂದ್ಯದ ನಡುವೆ ಲಖನೌ ತಂಡದ ಸ್ಟಾಫ್ ಫೋನ್ ಬಳಕೆ ಮಾಡುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಫೋನ್‌ನಲ್ಲಿ ಮಾತನಾಡುತ್ತಿರುವುದು ಪತ್ತೆಯಾಗಿದೆ.

ಇದು ಬಿಸಿಸಿಐಯ ಪ್ರಮುಖ ನಿಯಮದ ಉಲ್ಲಂಘನೆಯಾಗಿದ್ದು, ವಾರ್ನಿಂಗ್ ಬಳಿಕವೂ ಫೋನ್ ಬಳಕೆ ಮಾಡಿರುವುದೇ ಬಿಸಿಸಿಐ ನೊಟೀಸ್ ನೀಡುವ ಸಾಧ್ಯತೆ ಇದೆ. ಜೊತೆಗೆ ಈ ಬಾರಿ ದಂಡದ ಜೊತೆ ದೊಡ್ಡ ಮಟ್ಟದಲ್ಲೇ ಕಠಿಣ ಕ್ರಮಕೈಗೊಳ್ಳುವ ಸಾಧ್ಯತೆಯಿದೆ.

ಈಗಾಗಲೇ ಬಿಸಿಸಿಐ ಹೊಟೇಲ್ ರೂಂಗಳಲ್ಲಿ ಅಪರಿಚಿತರು, ಸೋಶಿಯಲ್ ಮೀಡಿಯಾ ಮೂಲಕ ಪರಿಚಯಸ್ಥರನ್ನು ಆಹ್ವಾನಿಸುತ್ತಿರುವುದು, ತಡ ರಾತ್ರಿವರೆಗೆ ಅಪರಿಚಿತರ ಜೊತೆಗೆ ತಂಗುತ್ತಿರುವ ಕುರಿತು ಕಠಿಣ ಎಚ್ಚರಿಕೆ ನೀಡಿದೆ.

Must Read