May 5, 2026
Tuesday, May 5, 2026
spot_img

MI vs LSG | ವಾಂಖೆಡೆಯಲ್ಲಿ ಮುಂಬೈ ದಾಳಿ: ಲಕ್ನೋ ವಿರುದ್ಧ ಭರ್ಜರಿ ಚೇಸ್, 6 ವಿಕೆಟ್‌ಗಳ ಗೆಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 47ನೇ ಪಂದ್ಯ ಅಭಿಮಾನಿಗಳಿಗೆ ರನ್ ಮಳೆಯ ರಸದೌತಣ ನೀಡಿತು.

ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಆರಂಭದಿಂದಲೇ ಪಂದ್ಯದಲ್ಲಿ ಹಿಡಿತ ಸಾಧಿಸಿದ ಮುಂಬೈ, ಕೊನೆಯವರೆಗೂ ಅದೇ ಲಯ ಮುಂದುವರಿಸಿ ಅಮೋಘ ಗೆಲುವು ತನ್ನದಾಗಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 228 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಮಿಚೆಲ್ ಮಾರ್ಷ್ ಚುರುಕಿನ 44 ರನ್‌ಗಳ ಕಾಣಿಕೆ ನೀಡಿದರೆ, ನಿಕೋಲಸ್ ಪೂರನ್ ಕೇವಲ 21 ಎಸೆತಗಳಲ್ಲಿ 63 ರನ್ ಸಿಡಿಸಿ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸಿದರು. ಕೊನೆಯಲ್ಲಿ ಐಡೆನ್ ಮಾರ್ಕ್ರಮ್ ಮತ್ತು ಹಿಮ್ಮತ್ ಸಿಂಗ್ ಉಪಯುಕ್ತ ರನ್‌ಗಳನ್ನು ಸೇರಿಸಿ ತಂಡದ ಮೊತ್ತವನ್ನು ಮತ್ತಷ್ಟು ಬಲಪಡಿಸಿದರು.

ಇದನ್ನೂ ಓದಿ:

ಕಠಿಣ ಗುರಿ ಬೆನ್ನಟ್ಟಿದ ಮುಂಬೈ ಪರ ರಯಾನ್ ರಿಕಲ್ಟನ್ ಮತ್ತು ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ರಿಕಲ್ಟನ್ 83 ರನ್ ಬಾರಿಸಿದರೆ, ರೋಹಿತ್ 84 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಮೂಲಕ ಗೆಲುವಿನ ಅಡಿಪಾಯ ಹಾಕಿದರು. ಅಂತಿಮ ಹಂತದಲ್ಲಿ ನಮನ್ ಧೀರ್ ಶಾಂತ ಆಟವಾಡಿ ತಂಡವನ್ನು 18.4 ಓವರ್‌ಗಳಲ್ಲೇ ಗುರಿ ತಲುಪಿಸಿದರು.

ಈ ಗೆಲುವಿನೊಂದಿಗೆ ಮುಂಬೈ ತನ್ನ ಅಭಿಯಾನಕ್ಕೆ ಹೊಸ ಚೈತನ್ಯ ತುಂಬಿಕೊಂಡರೆ, ಲಕ್ನೋಗೆ ಇದು ಮತ್ತೊಂದು ನಿರಾಸೆಯ ಸೋಲಾಗಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !