June 17, 2026
Wednesday, June 17, 2026
spot_img

ಪಂಜಾಬ್, ಕೆಕೆಆರ್ ಕನಸು ಭಗ್ನ: ಮುಂಬೈ ವಿರುದ್ಧ ಗೆದ್ದು ಪ್ಲೇಆಫ್‌ಗೇರಿದ ರಾಜಸ್ಥಾನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಪ್ಲೇಆಫ್​ ಗೆ ಯಾರು ಎಂಟ್ರಿ ನೀಡಲಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ರಾಜಸ್ಥಾನ ರಾಯಲ್ಸ್ ತಂಡ ನೇರವಾಗಿ ಪ್ಲೇಆಫ್ ಪ್ರವೇಶಿಸಿದೆ.

ಟೂರ್ನಿಯಿಂದ ಮುಂಬೈ ಔಟ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಹೈವೋಲ್ಟೇಜ್ ಸಮರದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ 205 ರನ್​ಗಳ ಸವಾಲಿನ ಮೊತ್ತ ದಾಖಲಿಸಿತ್ತು. 206 ರನ್​ಗಳ ಗುರಿಯನ್ನ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 9 ವಿಕೆಟ್ ಕಳೆದುಕೊಂಡು 175 ರನ್​ಗಳಿಸಿತ್ತು. ಈ ಮೂಲಕ 30 ರನ್​ಗಳ ಸೋಲಿನಿಂದ ಟೂರ್ನಿಯಿಂದ ಹೊರ ನಡೆದಿದೆ.

ಪ್ಲೇಆಫ್ ಎಂಟ್ರಿಕೊಟ್ಟ ರಾಜಸ್ಥಾನ

ಇತ್ತ ರಾಜಸ್ಥಾನ್ ರಾಯಲ್ಸ್ ತಂಡ 16 ಅಂಕಗಳೊಂದಿಗೆ 4ನೇ ತಂಡವಾಗಿ ನೇರವಾಗಿ ಪ್ಲೇಆಫ್ ಪ್ರವೇಶಿಸಿತು. ಇದರಂದ ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ತಂಡಗಳು ಟೂರ್ನಿಯಿಂದ ಹೊರಬಿದ್ದವು.

ಮತ್ತೆ ಕಳೆಪೆ ಆಟ

ಮುಂಬೈ ಇಂಡಿಯನ್ಸ್ ಇಂದೂ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಮೊದಲ ಓವರ್​ನಲ್ಲೇ ರೋಹಿತ್ ಶರ್ಮಾ ಡಕ್ ಔಟ್ ಆದರು. ನಮನ್​ ಧೀರ್​ 6 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ರಿಕಲ್ಟನ್​ 7 ಎಸೆತಗಳಲ್ಲಿ 1ಪೆವಿಲಿಯನ್ ಕಡೆ ಮುಖ ಮಾಡಿದರು. ತಿಲಕ್ ವರ್ಮಾ ಕೂಡ 3 ರನ್​​ ಸಿಡಿಸಿ ಬ್ರಿಜೇಶ್ ಶರ್ಮಾ ಬೌಲಿಂಗ್​​ನಲ್ಲಿ ಬೌಲ್ಡ್​​ ಆದರು.

ಇದರಿಂದ ಮುಂಬೈ 38 ರನ್​ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿದ್ದ ಹೀನಾಯ ಸ್ಥಿತಿಯಲ್ಲಿತ್ತು. ಬಳಿಕ ಬಂದಸೂರ್ಯಕುಮಾರ್ ಯಾದವ್ ಹಾಗೂ ವಿಲ್ ಜಾಕ್ಸ್​ 63 ರನ್​ಗಳ ಜೊತೆಯಾಟ ಆಡಿದರು. ವಿಲ್​ ಜಾಕ್ಸ್​ 18 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​​​​​​​​​​​​​​​​ಗಳ ಸಹಿತ 33 ರನ್​ಗಳಿಸಿ ಔಟ್ ಆದರು. ನಂತರ ಬಂದ ಹಾರ್ದಿಕ್ ಪಾಂಡ್ಯ 34 ರನ್​​​​​​ಗೆ ವಿಕೆಟ್ ಒಪ್ಪಿಸಿದರು.

ಸೂರ್ಯಕುಮಾರ್​ ಕುಮಾರ್​ 42 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್​ಗಳ ಸಹಿತ 60 ರನ್​ಗಳಿಸಿದರು. ದೀಪಕ್ ಚಾಹರ್ 8 ರನ್​ಗಳಿಸಿದರೆ, ಶಾರ್ದೂಲ್ ಠಾಕೂರ್ ಅಜೇಯ 10 ರನ್​ ಹಾಗೂ ಘಜನ್​ಫರ್ ಅಜೇಯ 2 ರನ್​ಗಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !