April 18, 2026
Saturday, April 18, 2026
spot_img

IPL | ಚಿನ್ನಸ್ವಾಮಿಯಲ್ಲಿ RCBಗೆ 100ನೇ ಪಂದ್ಯದ ಸಂಭ್ರಮ: ಡೆಲ್ಲಿ ವಿರುದ್ಧ ನಡೆಯಲಿದೆ ಮಹತ್ವದ ಹೋರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲು RCB ಸಜ್ಜಾಗಿದೆ. ತನ್ನ ತವರು ಮೈದಾನವಾದ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 100ನೇ ಪಂದ್ಯ ಆಡಲಿರುವ ಮೊದಲ ತಂಡ ಎಂಬ ಗೌರವಕ್ಕೆ ಆರ್‌ಸಿಬಿ ಪಾತ್ರವಾಗುತ್ತಿದೆ. ಇದೇ ದಿನ ಐಪಿಎಲ್ ಆರಂಭವಾಗಿ 19 ವರ್ಷ ಪೂರೈಸುತ್ತಿರುವುದು ಅಭಿಮಾನಿಗಳಿಗೆ ಡಬಲ್ ಸಂಭ್ರಮ ತಂದಿದೆ.

2008ರ ಏಪ್ರಿಲ್ 18ರಂದು ಇದೇ ಮೈದಾನದಲ್ಲಿ ಐಪಿಎಲ್‌ಗೆ ಚಾಲನೆ ದೊರಕಿತ್ತು. ಅಂದು ಬ್ರೆಂಡನ್ ಮೆಕಲಮ್ ಅವರ ಅಜೇಯ 158 ರನ್‌ಗಳ ಸಿಡಿಲಬ್ಬರದ ಬ್ಯಾಟಿಂಗ್ ಪಂದ್ಯಕ್ಕೆ ವಿಶೇಷ ಮೆರುಗು ನೀಡಿತ್ತು. ಆ ಪಂದ್ಯದಲ್ಲಿ ಆರ್‌ಸಿಬಿ ಕೇವಲ 140 ರನ್‌ಗಳಿಗೆ ಆಲೌಟ್ ಆಗಿದ್ದು, ಇದು ಚಿನ್ನಸ್ವಾಮಿಯಲ್ಲಿ ತಂಡದ ಕನಿಷ್ಠ ಸ್ಕೋರ್ ಆಗಿದೆ.

ಇದನ್ನೂ ಓದಿ:

ತವರಿನ ಮೈದಾನದಲ್ಲಿ ಆರ್‌ಸಿಬಿಯ ಪ್ರದರ್ಶನ ಸಮಬಲದಲ್ಲಿದ್ದು, ಆಡಿದ ಪಂದ್ಯಗಳಲ್ಲಿ 48 ಗೆಲುವು ಹಾಗೂ 46 ಸೋಲು ಕಂಡಿದೆ. ಒಂದು ಪಂದ್ಯ ಟೈ ಆಗಿದೆ. ಪಿಚ್ ಹಾಗೂ ಮೈದಾನದ ಸ್ವಭಾವ ತಿಳಿದಿರುವುದು ತಂಡಕ್ಕೆ ಹೆಚ್ಚುವರಿ ಲಾಭ ನೀಡುತ್ತಿದೆ.

ತವರಿನ ಮೈದಾನದಲ್ಲಿ ಹೆಚ್ಚು ಪಂದ್ಯ ಆಡಿದ ತಂಡಗಳ ಪಟ್ಟಿಯಲ್ಲಿ ಆರ್‌ಸಿಬಿ ಈಗ ಮೊದಲ ಸ್ಥಾನದಲ್ಲಿದೆ. ನಂತರ ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಬರುತ್ತವೆ.

ತಂಡದ ಯಶಸ್ಸಿನ ಹಿಂದೆ ಅಭಿಮಾನಿಗಳ ಬೆಂಬಲವೇ ಪ್ರಮುಖ ಶಕ್ತಿ. ಸೋಲು-ಗೆಲುವಿನಾಚೆಯೂ ಚಿನ್ನಸ್ವಾಮಿ ಮೈದಾನ ಸದಾ ಹೌಸ್‌ಫುಲ್ ಆಗಿರುತ್ತದೆ. “ಈ ಸಲ ಕಪ್ ನಮ್ದೇ” ಎಂಬ ಘೋಷಣೆಯೊಂದಿಗೆ ಅಭಿಮಾನಿಗಳು 100ನೇ ಪಂದ್ಯದ ಸಂಭ್ರಮವನ್ನು ಆಚರಿಸಲು ಸಜ್ಜಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !