September 11, 2026
Friday, September 11, 2026
spot_img

ಅಮೆರಿಕಕ್ಕೆ ಸೆಡ್ಡು ಹೊಡೆದ ಇರಾನ್: ನಮ್ಮ ಹಕ್ಕು ಸಿಗದೇ ಯಾವುದೇ ಒಪ್ಪಂದಕ್ಕೆ ಸಹಿ ಹಾಕಲ್ಲ ಎಂದ ಟೆಹ್ರಾನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷದ ಭೀತಿ ಶುರುವಾಗಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ರಹಸ್ಯ ಮಾತುಕತೆಗಳು ಮತ್ತೆ ಯುದ್ಧದ ಆತಂಕವನ್ನು ಹುಟ್ಟಿಸಿದೆ.

ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರಗಳನ್ನು ಹೊಂದುವುದಿಲ್ಲ ಎಂದು ತಮಗೆ ಒಪ್ಪಿಗೆ ಸೂಚಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತನ್ನು ನಿರಾಕರಿಸಿದ ಟೆಹ್ರಾನ್, ಇಸ್ಲಾಮಿಕ್ ದೇಶದ ಹಕ್ಕುಗಳು ಮತ್ತು ಆಸ್ತಿಗಳು ಸಂಪೂರ್ಣವಾಗಿ ಮುಕ್ತವಾಗದ ಹೊರತು ಅಮೆರಿಕದೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಖಡಕ್ ಸಂದೇಶ ನೀಡಿದೆ.

ಶತ್ರುವಿನ ಮಾತು ನಂಬಲ್ಲ

ಈ ಕುರಿತು ದೇಶವನ್ನುದ್ದೇಶಿಸಿ ಮಾತನಾಡಿದ ಇರಾನ್ ಸಂಸತ್ತಿನ ಸ್ಪೀಕರ್, ಮುಖ್ಯ ಸಂಧಾನಕಾರ ಮೊಹಮ್ಮದ್ ಬಾಗೇರ್ ಘಾಲಿಬಾಫ್, ಟೆಹ್ರಾನ್‌ನ ಸಂಧಾನಕಾರರು ಶತ್ರುವಿನ ಮಾತುಗಳನ್ನು ಯಾವುದೇ ಕಾರಣಕ್ಕೂ ನಂಬುವುದಿಲ್ಲ. ಇರಾನ್ ಜನತೆಯ ಹಕ್ಕುಗಳ ಕುರಿತು ಖಚಿತತೆ ಸಿಗುವವರೆಗೂ ಯಾವುದೇ ಅರೆಬರೆ ಒಪ್ಪಂದಕ್ಕೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಅಮೆರಿಕ ಮುಂದೆ ಕಠಿಣ ಷರತ್ತು

ನಮ್ಮ ಮೇಲಿರುವ ಜಾಗತಿಕ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸಬೇಕು ಮತ್ತು ಅದೇ ರೀತಿ ವಿದೇಶಿ ಬ್ಯಾಂಕ್‌ಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್‌ನ ಶತಕೋಟಿ ಡಾಲರ್ ಮೌಲ್ಯದ ಆಸ್ತಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಇರಾನ್ ಪಟ್ಟು ಹಿಡಿದಿದೆ. ಜೊತೆಗೆ ಹಾ ರ್ಮುಜ್ ಜಲಸಂಧಿಯ ಮೇಲಿನ ಸಂಪೂರ್ಣ ಹಿಡಿತ ನಮಗೆ ನೀಡಬೇಕು ಎಂದು ಅಮೆರಿಕ ಮುಂದೆ ಖಡಕ್ ಷರತ್ತು ವಿಧಿಸಿದೆ.

ಟ್ರಂಪ್ ಕೊಟ್ಟ ಎಚ್ಚರಿಕೆ ಏನು?

ಇತ್ತ ಖಾಸಗಿ ಸುದ್ಧಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮಿಲಿಟರಿ ವಾರ್ನಿಂಗ್ ನೀಡಿದ್ದು, ಇರಾನ್ ಜೊತೆಗೆ ಅತ್ಯಂತ ಪ್ರಮುಖ ಒಪ್ಪಂದದ ಹಂತಕ್ಕೆ ತಲುಪಿದ್ದೇವೆ. ಒಂದೊಮ್ಮೆ ನಮಗೆ ಬೇಕಾದ ಒಪ್ಪಂದ ಸಿಗದಿದ್ದರೆ, ನಾವು ಈ ಬಿಕ್ಕಟ್ಟನ್ನು ಬೇರೆ ರೀತಿಯಲ್ಲೇ ಅಂತ್ಯಗೊಳಿಸುತ್ತೇವೆ. ಯುದ್ಧ ಮೂಲಕ ನಮ್ಮ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ಆರಂಭಿಸುತ್ತೇವೆ ಎಂದು ಗುಡುಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !