May 17, 2026
Sunday, May 17, 2026
spot_img

ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್ ಭೀಕರ ದಾಳಿ: ಅಮೆರಿಕದ ಮಿಲಿಟರಿ ನೆಲೆಗಳು ಧ್ವಂಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪರ್ಷಿಯನ್ ಕೊಲ್ಲಿಯಲ್ಲಿ ಇತ್ತೀಚೆಗೆ ಇರಾನ್ ನಡೆಸಿದ ಸರಣಿ ದಾಳಿಗಳಿಂದ ಅಮೆರಿಕದ ಸೇನಾಪಡೆಗೆ ಬಾರೀ ಹೊಡೆತ ಬಿದ್ದಿದೆ. ಈ ಪ್ರದೇಶದಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳು ಮತ್ತು ಅತ್ಯಾಧುನಿಕ ರಕ್ಷಣಾ ಉಪಕರಣಗಳು ಇರಾನ್‌ನ ಗುರಿಯಾಗಿದ್ದು, ಶತಕೋಟಿ ಡಾಲರ್‌ಗಳಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ವರದಿಯಾಗಿದೆ.

ಫೆಬ್ರವರಿ 28 ರಿಂದ ಆರಂಭವಾದ ಈ ಸಂಘರ್ಷವು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಇರಾನ್ ನಡೆಸಿದ ಆಕ್ರಮಣಕಾರಿ ದಾಳಿಗಳು ಮಧ್ಯಪ್ರಾಚ್ಯದ ಕನಿಷ್ಠ ಏಳು ದೇಶಗಳಲ್ಲಿರುವ ಅಮೆರಿಕದ ಸೇನಾ ತಾಣಗಳ ಮೇಲೆ ಪರಿಣಾಮ ಬೀರಿದೆ. ದಾಳಿಯಲ್ಲಿ ಅಮೆರಿಕದ ಪ್ರಮುಖ ಮಿಲಿಟರಿ ಸೌಲಭ್ಯಗಳಾದ:

ಕಾರ್ಯಾಚರಣೆಗಳನ್ನು ನಿಯಂತ್ರಿಸುವ ಕೇಂದ್ರಗಳು.

ಶಸ್ತ್ರಾಸ್ತ್ರ ಮತ್ತು ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ತಾಣಗಳು.

ಯುದ್ಧ ವಿಮಾನಗಳನ್ನು ನಿಲ್ಲಿಸುವ ಸುರಕ್ಷಿತ ನೆಲೆಗಳು.

ಮಿಲಿಟರಿ ಸಂಪರ್ಕಕ್ಕೆ ಬಳಸುವ ಪ್ರಮುಖ ಸಿಸ್ಟಮ್‌ಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.

ವಿಶೇಷವೆಂದರೆ, ಅಮೆರಿಕದ ಅತ್ಯಂತ ಶಕ್ತಿಯುತ ಮತ್ತು ಅತ್ಯಾಧುನಿಕ ‘ಏರ್ ಡಿಫೆನ್ಸ್ ಸಿಸ್ಟಮ್’ ಅನ್ನು ಇರಾನ್‌ನ ಹಳೆಯ ಮಾದರಿಯ F-5 ಫೈಟರ್ ಜೆಟ್ ಭೇದಿಸಿರುವುದು ರಕ್ಷಣಾ ತಜ್ಞರನ್ನು ದಬ್ಬೆಬ್ಬಿಸಿದೆ. ಈ ದಾಳಿಯಿಂದಾಗಿ ರನ್‌ವೇಗಳು, ಶಕ್ತಿಶಾಲಿ ರಾಡಾರ್ ವ್ಯವಸ್ಥೆಗಳು ಮತ್ತು ಕಣ್ಗಾವಲು ನಡೆಸುವ ವಿಮಾನಗಳು ಜಖಂಗೊಂಡಿವೆ. ಇದು ಅಮೆರಿಕದ ಮುಂದಿನ ಮಿಲಿಟರಿ ಚಲನವಲನಗಳಿಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.

ಈ ದಾಳಿಯಿಂದ ಉಂಟಾದ ನಿಖರವಾದ ನಷ್ಟದ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ ಇದುವರೆಗೆ ಯಾವುದೇ ಅಧಿಕೃತ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಅತ್ತ ಪರ್ಷಿಯನ್ ಕೊಲ್ಲಿಯ ಕಾರ್ಯಾಚರಣೆಗಳನ್ನು ನಿರ್ವಹಿಸುವ ‘ಯುಎಸ್ ಸೆಂಟ್ರಲ್ ಕಮಾಂಡ್’ ಕೂಡ ಹಾನಿಯ ವ್ಯಾಪ್ತಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಆದರೆ, ಮೂಲಗಳ ಪ್ರಕಾರ ಈ ಹಾನಿಯ ದುರಸ್ತಿಗೆ ಶತಕೋಟಿ ಡಾಲರ್‌ಗಳ ಅಗತ್ಯವಿದೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !