July 17, 2026
Friday, July 17, 2026
spot_img

ಇಸ್ರೇಲ್ ನಿಂದ ‘ಆಪರೇಷನ್ ರೋರಿಂಗ್ ಲಯನ್’: ಇರಾನ್ ಮೇಲಿನ ದಾಳಿಯ ಮೊದಲ ವಿಡಿಯೋ ರಿಲೀಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದು, ರಾಜಧಾನಿ ಟೆಹ್ರಾನ್ ಮೇಲೆ ಶನಿವಾರ ಭೀಕರ ಕ್ಷಿಪಣಿ ದಾಳಿ ಆರಂಭಿಸಿದೆ. ಇದೀಗ ಈ ದಾಳಿಯ ಮೊದಲ ಅಧಿಕೃತ ವಿಡಿಯೊವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಈ ದಾಳಿಗೆ ‘ಆಪರೇಷನ್ ರೋರಿಂಗ್ ಲಯನ್’ ಎಂಬ ಹೆಸರು ಇಡಲಾಗಿದೆ.

ಯುನೈಟೆಡ್ ಸ್ಟೇಟ್ಸ್ (US) ಮತ್ತು ಇಸ್ರೇಲ್ ಜಂಟಿಯಾಗಿ ಆಪರೇಷನ್ ರೋರಿಂಗ್ ಲಯನ್ ಅಡಿಯಲ್ಲಿ ಪಶ್ಚಿಮ ಇರಾನ್‌ ಮೇಲೆ ದಾಳಿ ನಡೆಸಿವೆ.

ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಇಬ್ಬರನ್ನೂ ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ಆದರೆ ಇದರ ಪರಿಣಾಮ ಏನು ಎಂಬುದು ತಕ್ಷಣ ಸ್ಪಷ್ಟವಾಗಿಲ್ಲ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !