July 25, 2026
Saturday, July 25, 2026
spot_img

ಸಂಬಳ ಕೊಟ್ಟಿಲ್ಲ ಎಂದು ಆರ್‌ಸಿಬಿ ಮ್ಯಾಚ್‌ ದಿನವೇ ರಿವೇಂಜ್‌ ತಗೊಂಡ ಐಟಿ ಸಿಬ್ಬಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಿಂದೆ ನಡೆದ ಆರ್‌ಸಿಬಿ ಮ್ಯಾಚ್‌ ವೇಳೆ ಸಿಸಿಟಿವಿ ವೈರ್‌ಗಳನ್ನು ಕಟ್‌ ಮಾಡಲಾಗಿತ್ತು. ಈ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಈ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದೆ.

ಆರ್‌ಸಿಬಿ ಮ್ಯಾಚ್‌ ದಿನ 240ಕ್ಕೂ ಹೆಚ್ಚು ಸಿಸಿಟಿವಿ ಕೇಬಲ್‌ಗಳನ್ನು ಕತ್ತರಿಸಿದ್ದು ಯಾರೋ ಹೊರಗಿನವರಲ್ಲ! ಐಟಿ ಸಿಬ್ಬಂದಿ ಎಂದು ತಿಳಿದುಬಂದಿದೆ. ಎಷ್ಟೋ ಸಮಯದಿಂದ ಸಂಬಳ ನೀಡಿಲ್ಲ ಎಂದು ಕ್ಯಾಮರಾ ವೈರ್‌ಗಳನ್ನು ಕಟ್‌ ಮಾಡಿ ರಿವೇಂಜ್‌ ತೀರಿಸಿಕೊಂಡಿದ್ದಾರೆ.

ಏಪ್ರಿಲ್‌ 24ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಗುಜರಾತ್‌ ಟೈಟನ್ಸ್‌ ನಡುವೆ ಮ್ಯಾಚ್‌ ನಡೆದಿತ್ತು. ಈ ವೇಳೆ ಭದ್ರತೆಗೆಂದು ಹಾಕಿದ್ದ ಸಿಸಿಟಿವಿಗಳ ವೈರ್‌ಗಳನ್ನು ಕಟ್‌ ಮಾಡಿ ಹಾಳು ಮಾಡಲಾಗಿತ್ತು. ಇದನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಂಡಿದ್ದರು.

ಆರೋಪಿಗಳಾದ ಶ್ರೀನಿವಾಸ್‌ ಹಾಗೂ ಅಬ್ದುಲ್‌ ಕಲಾಂ ವಿಚಾರಣೆ ವೇಳೆ ನಿಜ ಒಪ್ಪಿಕೊಂಡಿದ್ದಾರೆ. ನಾವು ಐವಿಎಸ್‌ ಡಿಜಿಟಲ್‌ ಸೊಲ್ಯೂಷನ್ಸ್‌ ಕಂಪನಿಯ ಸಿಬ್ಬಂದಿ. ನಮಗೆ ಕೆಲ ತಿಂಗಳಿನಿಂದ ಸಂಬಳ ಸಿಕ್ಕಿಲ್ಲ. ಇದಕ್ಕಾಗಿ ಕಂಪನಿ ಹಾಗೂ ಕ್ರೀಡಾಂಗಣದ ಆಡಳಿತ ಮಂಡಳಿಗೆ ಪಾಠ ಕಲಿಸೋಕೆ ಹೀಗೆ ಮಾಡಿದ್ವಿ ಎಂದು ಒಪ್ಪಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !