August 13, 2026
Thursday, August 13, 2026
spot_img

ಕಾರಲ್ಲ, ಇದು ಚಲಿಸುವ ಐಷಾರಾಮಿ ಮನೆ: ಕಿಚ್ಚನ ಹೊಸ ಕ್ಯಾರವಾನ್‌ ನೋಡಿದ್ದೀರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವೈಯಕ್ತಿಕ ವಾಹನಗಳ ಸಂಗ್ರಹಕ್ಕೆ ಮತ್ತೊಂದು ವಿಶೇಷ ಸೇರ್ಪಡೆಯಾಗಿದೆ. ಸಿನಿಮಾ ಚಿತ್ರೀಕರಣದ ವೇಳೆ ಬಳಸಲು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಸುಮಾರು 6.5 ಕೋಟಿ ರೂ. ಮೌಲ್ಯದ ಐಷಾರಾಮಿ ಕ್ಯಾರವಾನ್ ಇದೀಗ ಅವರಿಗಾಗಿ ಸಿದ್ಧಗೊಂಡಿದ್ದು, ಕನ್ನಡ ಚಿತ್ರರಂಗದಲ್ಲಿ ದುಬಾರಿ ಕ್ಯಾರವಾನ್‌ಗಳ ಪಟ್ಟಿಯಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ವೈಯಕ್ತಿಕ ಅಗತ್ಯಗಳಿಗೆ ತಕ್ಕ ವಿನ್ಯಾಸ

ಈ ಕ್ಯಾರವಾನ್‌ನ್ನು ಸುದೀಪ್ ಅವರ ಅಭಿರುಚಿ ಹಾಗೂ ಚಿತ್ರೀಕರಣದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಪುಣೆಯಲ್ಲಿ ನಿರ್ಮಾಣಗೊಂಡಿರುವ ಈ ಮೊಬೈಲ್ ವ್ಯಾನಿಟಿ, ಹೊರಗಿನಿಂದ ಆಕರ್ಷಕವಾಗಿದ್ದರೆ, ಒಳಭಾಗದಲ್ಲಿ ಐಷಾರಾಮಿ ಹೋಟೆಲ್‌ ಮಾದರಿಯ ಅನುಭವ ನೀಡುವಂತೆ ರೂಪಿಸಲಾಗಿದೆ.

ಇದನ್ನೂ ಓದಿ:

ಒಂದೇ ವಾಹನದಲ್ಲಿ ಎಲ್ಲಾ ಸೌಲಭ್ಯ

ಒಳಭಾಗದಲ್ಲಿ ವಿಶ್ರಾಂತಿ ಕೊಠಡಿ, ಮೇಕಪ್ ವಿಭಾಗ, ಸಭೆ ನಡೆಸಲು ಪ್ರತ್ಯೇಕ ಸ್ಥಳ, ಆರಾಮದಾಯಕ ಆಸನ ವ್ಯವಸ್ಥೆ, ಆಧುನಿಕ ಲೈಟಿಂಗ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ದೀರ್ಘಕಾಲದ ಶೂಟಿಂಗ್ ವೇಳೆಯಲ್ಲೂ ಕಲಾವಿದರಿಗೆ ಆರಾಮದಾಯಕ ವಾತಾವರಣ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

‘K’ ಗುರುತು ಸೆಳೆಯುವ ಆಕರ್ಷಣೆ

ಕ್ಯಾರವಾನ್‌ನ ಮುಂಭಾಗ ಹಾಗೂ ಹಿಂಭಾಗದಲ್ಲಿ ಅಳವಡಿಸಿರುವ ವಿಶೇಷ ‘K’ ಲೋಗೋ ಮತ್ತೊಂದು ವಿಶೇಷವಾಗಿದೆ. ಇದು ಕಿಚ್ಚ ಸುದೀಪ್ ಅವರ ವೈಯಕ್ತಿಕ ಬ್ರ್ಯಾಂಡ್ ಗುರುತನ್ನು ಪ್ರತಿಬಿಂಬಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅವರ ಇತರ ವಾಹನಗಳ ವಿನ್ಯಾಸಕ್ಕೂ ಹೊಂದಿಕೆಯಾಗುತ್ತದೆ.

ಚಿತ್ರದ ಚಿತ್ರೀಕರಣಕ್ಕೂ ಸಜ್ಜು

ಇದೇ ವೇಳೆ, ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಬಿಲ್ಲ ರಂಗ ಬಾಷಾ’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಿದೆ. ಸುಮಾರು ಒಂದು ವರ್ಷದ ವಿರಾಮದ ಬಳಿಕ ಮತ್ತೆ ಸೆಟ್‌ಗೆ ಮರಳಿರುವ ಚಿತ್ರತಂಡ, ಕನಕಪುರ ಸಮೀಪ ನಿರ್ಮಿಸಿರುವ ಭವ್ಯ ಸೆಟ್‌ನಲ್ಲಿ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸುತ್ತಿದೆ. ಹೊಸ ಕ್ಯಾರವಾನ್‌ ಕೂಡ ಇದೇ ವೇಳೆಯಲ್ಲಿ ಸುದೀಪ್ ಅವರ ಶೂಟಿಂಗ್ ಪ್ರಯಾಣದ ಭಾಗವಾಗಲಿದೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !