October 19, 2026
Monday, October 19, 2026
spot_img

ಬನ್ನೂರಿನಲ್ಲಿ ಜಯಲಲಿತಾ ಸಹೋದರ ಎನ್.ಜೆ. ವಾಸುದೇವನ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಸಹೋದರ ಎನ್‌.ಜೆ. ವಾಸುದೇವನ್‌ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

92 ವಯಸ್ಸಿನ ವಾಸುದೇವನ್‌ ಅವರು ವಯೋಸಹಜ ಸಮಸ್ಯೆಗಳಿಂದ ನಿಧನರಾಗಿದ್ದಾರೆ. ಮೈಸೂರು ಜಿಲ್ಲೆಯ ಬನ್ನೂರು ಪಟ್ಟಣದ ಸಮೀಪ ಇರುವ ಚಾಮನಹಳ್ಳಿಯಲ್ಲಿ ವಾಸುದೇವನ್‌ ವಾಸವಿದ್ದರು.

ತಮ್ಮ ಸಾಕುಮಗಳ ಜೊತೆ ಇದ್ದ ವಾಸುದೇವನ್‌ ಅವರ ಅಂತ್ಯಕ್ರಿಯೆ ಇಂದು ಸಂಜೆ ರಂಗರಾಜಪುರದಲ್ಲಿ ನೆರವೇರಲಿದೆ. ಜಯಲಲಿತಾ ಕುಟುಂಬದ ಹಿರಿಯ ಸದಸ್ಯರಾಗಿದ್ದ ವಾಸುದೇವನ್‌ ಅವರ ನಿಧನಕ್ಕೆ ಆಪ್ತರು ಸಂತಾಪ ಸೂಚಿಸಿದ್ದಾರೆ.

Must Read