September 14, 2026
Monday, September 14, 2026
spot_img

ರಾಜಸ್ಥಾನಕ್ಕೆ ಜುರೆಲ್-ಆರ್ಚರ್ ಆಸರೆ: ಮುಂಬೈಗೆ ಸವಾಲಿನ ಟಾರ್ಗೆಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ವಿರುದ್ದದ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳು ಎಡವಿದ ಪರಿಣಾಮ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿದೆ.

ಮೊದಲು ಬ್ಯಾಟಿಂಗ್ ಆರಂಭಿಸಿದ ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ ತಂಡ ಆರಂಭದಲ್ಲೇ ಬ್ಯಾಟಿಂಗ್ ಲೈನ್ ಆಫ್ ತಪ್ಪಿತು.ಯಶಸ್ವಿ ಜೈಸ್ವಾಲ್ 27 ರನ್‌ಗಳಿಗೆ ಔಟ್ ಆದರೆ, ವೈಭವ್ ಸೂರ್ಯವಂಶಿ ನಾಲ್ಕು ರನ್ ಗಳಿಸಿ ನಿರಾಸೆ ಮೂಡಿಸಿದರು. ಬಳಿಕ ಬಂದ ನಾಯಕ ರಿಯಾನ್ ಪರಾಗ್ 14 ರನ್ ಗೆ ಕೈ ಕೊಟ್ಟರು.

ಎಡವಿದ ಬ್ಯಾಟ್ಸ್ ಮ್ಯಾನ್ ಗಳು

ನಂತರ ಜೊತೆಯಾದ ದಾಸುನ್ ಶನಕ ಮತ್ತು ಧ್ರುವ್ ಜುರೆಲ್ ನಾಲ್ಕನೇ ವಿಕೆಟ್‌ಗೆ 45 ರನ್ ಸೇರಿಸಿದರು. ಶನಕ 15 ಎಸೆತಗಳಲ್ಲಿ ಮೂರು ಸಿಕ್ಸರ್‌ ನೆರವಿನಿಂದ 29 ರನ್ ಗಳಿಸಿದರು. ಜುರೆಲ್ 26 ಎಸೆತಗಳಲ್ಲಿ 38 ರನ್ ಗಳಿಸಿದರು. ಮತ್ತೆ ಬಂದ ಡೊನೊವನ್ ಫೆರೇರಾ 18 ರನ್ ಗೆ ಇನ್ನಿಂಗ್ಸ್ ಕೊನೆಗೊಳಿಸಿದರು. ಶುಭಂ ದುಬೆ ಕೇವಲ 5 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.

ಜೋಫ್ರಾ ಆರ್ಚರ್ ಸ್ಫೋಟಕ ಬ್ಯಾಟಿಂಗ್

ಬಳಿಕ ತಂಡಕ್ಕೆ ಆಸರೆಯಾದ ವೇಗಿ ಜೋಫ್ರಾ ಆರ್ಚರ್ ಸ್ಫೋಟಕ ಬ್ಯಾಟಿಂಗ್ ಮೂಲಕ 32 ರನ್ ಗಳಿಸಿದರು. ಕೊನೆಯಲ್ಲಿ ಬಂದ ರವೀಂದ್ರ ಜಡೇಜಾ 11 ಎಸೆತಗಳಲ್ಲಿ 3 ಬೌಂಡರಿ ಮೂಲಕ ಅಜೇಯ 19 ರನ್ ಗಳಿಸಿದರು. ಮತ್ತೊಂದೆಡೆ ನಾಂಡ್ರೆ ಬರ್ಗರ್ 10 ರನ್ ಚಚ್ಚಿದರು. ಈ ಮೂಲಕ ರಾಜಸ್ಥಾನ ತಂಡವನ್ನು 200 ರ ಗಡಿ ದಾಟಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !