ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ ಸೋಲುಗಳಿಂದ ಒತ್ತಡದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೊನೆಗೂ ಐಪಿಎಲ್‌ನಲ್ಲಿ ಗೆಲುವಿನ ಹಾದಿಗೆ ಮರಳಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿದ್ದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕೆಕೆಆರ್ ಗೆಲುವು ದೂರದ ಕನಸಾಗಿತ್ತು. ಆದರೆ ರಿಂಕು ಸಿಂಗ್ ಅಂತಿಮ ಓವರ್‌ಗಳಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ಪಂದ್ಯವನ್ನು ತಿರುಗಿಸಿದರು. ಅವರಿಗೆ ಸಾಥ್ ನೀಡಿದ ಅನುಕೂಲ್ ರಾಯ್ ಕೂಡ ಭರ್ಜರಿ ಹೊಡೆತಗಳಿಂದ ತಂಡವನ್ನು ಗುರಿಯತ್ತ ಕೊಂಡೊಯ್ದರು.
ಇಬ್ಬರ ನಡುವೆ ನಡೆದ 7ನೇ ವಿಕೆಟ್‌ಗಾಗಿ 37 ಎಸೆತಗಳಲ್ಲಿ 76 ರನ್‌ಗಳ ಅಮೂಲ್ಯ ಜೊತೆಯಾಟವೇ ಪಂದ್ಯ ಗೆಲುವಿನ ಟರ್ನಿಂಗ್ ಪಾಯಿಂಟ್ ಆಯಿತು. ರಿಂಕು 53 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದರೆ, ಅನುಕೂಲ್ 29 ರನ್‌ಗಳ ವೇಗದ ಕೊಡುಗೆ ನೀಡಿದರು.
ಇದನ್ನೂ ಓದಿ:
ಮಧ್ಯಮ ಕ್ರಮದಲ್ಲಿ ಕ್ಯಾಮೆರೋನ್ ಗ್ರೀನ್ (27 ರನ್), ರೋವಮಂ ಪೊವೆಲ್ (23 ರನ್) ಮತ್ತು ರಮಣದೀಪ್ ಸಿಂಗ್ ನೀಡಿದ ಸಣ್ಣ ಕೊಡುಗೆಗಳು ತಂಡದ ಚೇಸ್‌ಗೆ ನೆರವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡ ಉತ್ತಮ ಆರಂಭ ಪಡೆದಿತ್ತು. ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಜೋಡಿ ಮೊದಲ ವಿಕೆಟ್‌ಗೆ 81 ರನ್‌ಗಳ ಜೊತೆಯಾಟ ನೀಡಿದರು. ಆದರೆ ಈ ಜೋಡಿ ಔಟ್ ಆದ ಬಳಿಕ ಮಧ್ಯಮ ಕ್ರಮ ಸಂಪೂರ್ಣ ವಿಫಲವಾಯಿತು.
ನಾಯಕ ರಿಯಾನ್ ಪರಾಗ್ ಸೇರಿದಂತೆ ಉಳಿದ ಆಟಗಾರರು ಕಡಿಮೆ ಮೊತ್ತಕ್ಕೆ ಔಟಾಗುತ್ತಿದ್ದಂತೆ ತಂಡ 20 ಓವರ್‌ಗಳಲ್ಲಿ 155 ರನ್‌ಗೆ ಸೀಮಿತವಾಯಿತು.
156 ರನ್‌ಗಳ ಗುರಿ ಬೆನ್ನಟ್ಟಿದ ಕೆಕೆಆರ್, ಕೊನೆಯ ಕ್ಷಣದವರೆಗೂ ಸೋಲಿನ ರುಚಿ ಅನುಭವಿಸಿ ಪಂದ್ಯದಲ್ಲಿ 19.4 ಓವರ್‌ಗಳಲ್ಲಿ 161 ರನ್ ಬಾರಿಸಿ ಜಯ ಸಾಧಿಸಿತು.



