ಇಂದಿನ ಜೀವನದಲ್ಲಿ ಪ್ರತಿದಿನವೂ ಏನಾದರೂ ಒಂದು ಪ್ಲಾನ್ ಇರುತ್ತದೆ. ಕೆಲಸ, ಮೀಟಿಂಗ್, deadlines, ಕಾಲ್ಸ್, responsibilities ದಿನ ಮುಗಿಯುವಷ್ಟರಲ್ಲಿ ಮನಸ್ಸು ಕೂಡ ದಣಿದು ಹೋಗಿರುತ್ತದೆ. ಕೆಲವೊಮ್ಮೆ ನಾವು ಇಷ್ಟು ಬ್ಯುಸಿ ಆಗಿಬಿಡುತ್ತೇವೆ, ಖಾಲಿಯಾಗಿ ಇರುವುದನ್ನೇ ತಪ್ಪು ಅನ್ನೋ ಹಾಗೆ ಫೀಲ್ ಆಗಿಬಿಡುತ್ತೆ.
ಆದರೆ ನಿಜವಾಗಿ ನೋಡಿದರೆ, ಜೀವನಕ್ಕೆ ಕೆಲವೊಮ್ಮೆ ‘No Plans Day’ಗಳು ತುಂಬಾ ಅಗತ್ಯ. ಯಾವುದೇ ಒತ್ತಡ ಇಲ್ಲದೆ, ಏನನ್ನೂ ಸಾಧಿಸಬೇಕೆಂಬ ಹಠ ಇಲ್ಲದೆ, ಕೇವಲ ಮನಸ್ಸಿಗೆ ಬೇಕಾದಂತೆ ದಿನ ಕಳೆಯೋದು ಕೂಡ ಒಂದು ರೀತಿಯ relaxation.
ಅಂಥ ದಿನಗಳಲ್ಲಿ ನಾವು ನಿಧಾನವಾಗಿ ಬದುಕುತ್ತೇವೆ. ಅಲಾರಂ ಇಲ್ಲದೆ ಎದ್ದು, ಫೋನ್‌ನ್ನು ಸ್ವಲ್ಪ ದೂರ ಇಟ್ಟು, ಏನೂ ಅರ್ಜೆಂಟ್ ಇಲ್ಲದೆ ಸಮಯ ಕಳೆಯುತ್ತೇವೆ. ಹೊರಗೆ ನೋಡಿದರೆ ಏನೂ ಸ್ಪೆಷಲ್ ಆಗಿ ಕಾಣಿಸದೇ ಇರಬಹುದು, ಆದರೆ ಮನಸ್ಸಿಗೆ ಅದು ದೊಡ್ಡ ಬ್ರೇಕ್ ಆಗಿರುತ್ತೆ.
ಇದನ್ನೂ ಓದಿ:
ಯಾವಾಗಲೂ productive ಆಗಿರಬೇಕು ಅನ್ನೋ ಮೈಂಡ್ ಸೆಟ್ ನಡುವೆ, ಕೆಲವೊಮ್ಮೆ ಏನೂ ಮಾಡದೇ ಇರುವುದು ಕೂಡ ಅಗತ್ಯ. ಯಾಕೆಂದರೆ ಮನುಷ್ಯ ಮಷೀನ್ ಅಲ್ಲ. ನಿರಂತರ ಓಟದ ಮಧ್ಯೆ ಸ್ವಲ್ಪ ಪೌಸ್ ಬೇಕೇ ಬೇಕು.
‘No Plans Day’ಗಳು ನಮ್ಮ ಎನರ್ಜಿ ಮಾತ್ರ ಅಲ್ಲ, ನಮ್ಮ ಮನಸ್ಸನ್ನೂ ರಿಚಾರ್ಜ್ ಮಾಡುತ್ತವೆ. ಕೆಲವೊಮ್ಮೆ ಜೀವನವನ್ನು ಎಂಜಾಯ್ ಮಾಡೋಕೆ ದೊಡ್ಡ vacation ಬೇಕಾಗುವುದಿಲ್ಲ… ಯಾವುದೇ ಪ್ಲಾನ್ ಇಲ್ಲದ ಒಂದು ಶಾಂತ ದಿನ ಸಾಕಾಗುತ್ತದೆ.



