ಇಂದು ಎಲ್ಲವೂ ವೇಗವಾಗಿದೆ. ಬೆಳಗ್ಗೆ ಕಣ್ಣು ತೆರೆದ ಕ್ಷಣದಿಂದಲೇ ಓಟ ಶುರು. ಕೆಲಸದ ಒತ್ತಡ, ಟಾರ್ಗೆಟ್ ಹಿಂದೆ ಓಟ, ನೋಟಿಫಿಕೇಶನ್‌ಗಳ ಶಬ್ದ, ನಿರಂತರ ಬ್ಯುಸಿ ದಿನಚರಿ. ಜೀವನ ಮುಂದಕ್ಕೆ ಸಾಗುತ್ತಿದೆ ಸರಿ… ಆದರೆ ಅದನ್ನು ಅನುಭವಿಸೋ ಸಮಯ ಮಾತ್ರ ನಿಧಾನವಾಗಿ ಕಣ್ಮರೆಯಾಗುತ್ತಿದೆ.
ಈ ವೇಗದ ನಡುವೆ ಕೆಲ ಸ್ಲೋ ಮೊಮೆಂಟ್ಸ್ ನಮ್ಮ ಮನಸ್ಸಿಗೆ ಬ್ರೇಕ್‌ಗಳಂತೆ ಕೆಲಸ ಮಾಡುತ್ತವೆ. ಬೆಳಗಿನ ಒಂದು ಶಾಂತ ಕಾಫಿ, ಮಳೆಯನ್ನ ಕಿಟಕಿಯಿಂದ ನೋಡುವ ಕೆಲವು ನಿಮಿಷಗಳು, ಕಿವಿಗೊಟ್ಟು ಕೇಳುವ ಹಕ್ಕಿಯ ಚಿಲಿಪಿಲಿ, ಫೋನ್ ದೂರ ಇಟ್ಟು ಮೌನವಾಗಿ ಕುಳಿತುಕೊಳ್ಳೋ ಸಮಯ, ಅಥವಾ ಯಾವುದೇ ಗುರಿಯಿಲ್ಲದೇ ಒಂದು ನಡಿಗೆ ಇಂತಹ ಸಣ್ಣ ಕ್ಷಣಗಳು ಮನಸ್ಸನ್ನು ಮತ್ತೆ ರೀಸೆಟ್ ಮಾಡುತ್ತವೆ.
ನಾವು ಯಾವಾಗಲೂ ವೇಗದಲ್ಲೇ ಬದುಕಿದ್ರೆ, ಬದುಕಿನ ಸೌಂದರ್ಯ ಗಮನಕ್ಕೆ ಬರೋದೇ ಇಲ್ಲ. ನಿಧಾನವಾಗಿ ಬದುಕುವ ಕ್ಷಣಗಳಲ್ಲೇ ನಾವು ನಮ್ಮ ಆಲೋಚನೆಗಳನ್ನು ಕೇಳುತ್ತೇವೆ, ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತೇವೆ, ಜೀವನದ ಸಣ್ಣ ಸಂತೋಷಗಳನ್ನು ಅನುಭವಿಸುತ್ತೇವೆ. ಇದೇ ಕ್ಷಣಗಳು ಒಳಗೆ ನೆಮ್ಮದಿ ತುಂಬುತ್ತವೆ.
ಇದನ್ನೂ ಓದಿ:
ಸ್ಲೋ ಮೊಮೆಂಟ್ಸ್ ಅಂದ್ರೆ ಸಮಯ ವ್ಯರ್ಥ ಮಾಡೋದು ಅಲ್ಲ. ಅದು ಜೀವನದ ಜೊತೆ ಮತ್ತೆ ಕನೆಕ್ಟ್ ಆಗೋದು. ಯಾಕೆಂದರೆ ಜೀವನದ ಮೌಲ್ಯ ಕೇವಲ ಎಷ್ಟು ವೇಗವಾಗಿ ಓಡಿದೆ ಅನ್ನೋದಲ್ಲ… ಮಧ್ಯೆ ಎಷ್ಟು ಕ್ಷಣಗಳನ್ನು ನಿಜವಾಗಿ ಬದುಕಿದೆ ಅನ್ನೋದರಲ್ಲಿ ಇದೆ.
ಕೆಲವೊಮ್ಮೆ ಸ್ವಲ್ಪ ನಿಧಾನವಾಗಿ ನಡೆಯೋದು ಕೂಡ ಅಗತ್ಯ. ಯಾಕೆಂದರೆ ಫಾಸ್ಟ್ ಲೈಫ್ ನಮ್ಮನ್ನು ಮುಂದೆ ಕರೆದೊಯ್ಯಬಹುದು…ಆದರೆ slow moments ಮಾತ್ರ ನಮ್ಮನ್ನು ನಮ್ಮೊಳಗೆ ಕರೆದೊಯ್ಯುತ್ತವೆ.



