July 6, 2026
Monday, July 6, 2026
spot_img

ಬಸವೇಶ್ವರ ದೇವಾಲಯದಲ್ಲಿ ಭಾರಿ ಕಳ್ಳತನ: 60 ಕೆಜಿ ಬೆಳ್ಳಿ ಪೂಜಾ ಸಾಮಗ್ರಿ ಕಳ್ಳರ ಪಾಲು

ಹೊಸದಿಗಂತ ವರದಿ ವಿಜಯಪುರ:

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಕ್ಷೇತ್ರ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ 1.20 ಕೋಟಿ ರೂ.ಗಳ ಮೌಲದ್ಯ 60 ಕೆಜಿಯ ದೇವರ ಬೆಳ್ಳಿ ಮೂರ್ತಿ ಸೇರಿ ಪೂಜಾ ಸಾಮಗ್ರಿಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ.

ಇಲ್ಲಿನ ಸೇವಸ್ಥಾನದಲ್ಲಿನ ಅಂದಾಜು 35 ಕೆಜಿ ತೂಕದ ದೇವರ ಬೆಳ್ಳಿಯ ಮುಖ ಕವಚ ಮತ್ತು ದಿನನಿತ್ಯ ಪೂಜೆಗೆ ಬಳಸುತ್ತಿದ್ದ 10 ಕೆಜಿ ಬೆಳ್ಳಿ ಮೂರ್ತಿ ಸೇರಿದಂತೆ ಒಟ್ಟು 60 ಕೆಜಿಗೂ ಹೆಚ್ಚು ಪ್ರಮಾಣದ ಪೂಜಾ ಸಾಮಗ್ರಿಗಳನ್ನು ಕಳ್ಳರು ಕದಿದ್ದು, ಗ್ರಾಮದಲ್ಲಿ ತೀವ್ರ ಆತಂಕ ಮೂಡುವಂತಾಗಿದೆ.

ಇದನ್ನೂ ಓದಿ:

ದೇವಸ್ಥಾನದ ಈ ಎಲ್ಲ ಬೆಳ್ಳಿಯ ಆಭರಣವನ್ನು ಈ ಹಿಂದೆ ಮುದ್ದೇಬಿಹಾಳ ಶಾಸಕರಿದ್ದ ಎ.ಎಸ್. ಪಾಟೀಲ ನಡಹಳ್ಳಿಯವರು ದೇವಸ್ಥಾನಕ್ಕೆ ನೀಡಿದ್ದು ಎಂದು ತಿಳಿದು ಬಂದಿದೆ.

ಕಳ್ಳತನ ಸಮಯದಲ್ಲಿ ಸಿಸಿ ಟಿವಿ ಬಂದ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಸ್ಥಳಕ್ಕೆ ಮುದ್ದೇಬಿಹಾಳ ಪಿಎಸ್ಐ ಸಂಜಯ ತಿಪರೆಡ್ಡಿ, ಅಪರಾಧ ವಿಭಾಗದ ಪಿಎಸ್ಐ ಆರ್.ಎಸ್. ಬಂಗಿ, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !